ಮುಂಬೈ, ಏ.28-ದೇಶದ ವಿವಿಧೆಡೆ ಹಣಕಾಸು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. 1,000 ಕೋಟಿ ರೂ.ಗಳ ಹಣ ಅವ್ಯವಹಾರ ಮತ್ತು ದುರ್ಬಳಕೆ ಪ್ರಕರಣದ ಸಂಬಂಧ ಮುಂಬೈ ಮೂಲದ ಲೆಕ್ಕಪರಿಶೋಧಕ (ಸಿಎ) ದಿನೇಶ್ ಜಾಜೊಡಿಯಾರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ.
ಜಿಯೋಡೆಸಿಕ್ ಲಿಮಿಟೆಡ್ ವಿರುದ್ಧದ 1,000 ಕೋಟಿ ರೂ. ಹಣ ದುವ್ರ್ಯವಹಾರ ಸಂಬಂಧ ಕಳೆದ ಎರಡು ವರ್ಷಗಳಿಂದ ತನಿಖೆ ಕೈಗೊಂಡಿದ್ದ ಇಡಿ ಅಧಿಕಾರಿಗಳು ನಿನ್ನೆ ಮುಂಬೈನಲ್ಲಿ ಪ್ರಮುಖ ಆರೋಪಿ ಜಾಜೊಡಿಯಾರನ್ನು ಬಂಧಿಸಿದರು.
ಮುಂಡು ಟಿವಿ ಎಂಬ ನೇರ ಇಂಟರ್‍ನೆಟ್ ಟೆಲಿವಿಷನ್ ಸೇವೆಯಂಥ ಅನ್ವೇಷಣಾತ್ಮಕ ಕಾರ್ಯಗಳಲ್ಲಿ ಗುರುತಿಸಿಕೊಂಡಿತ್ತು. ಭಾರೀ ಪ್ರಮಾಣದ ಆರ್ಥಿಕ ವಂಚನೆ ಆರೋಪಗಳ ಮೇಲೆ ಈ ಸಂಸ್ಥೆಯ ಮೂವರು ನಿರ್ದೇಶಕರನ್ನು 2016ರ ಜನವರಿಯಲ್ಲಿ ಬಂಧಿಸಲಾಗಿತ್ತು.