ರಂಗಿಯಾ(ಅಸ್ಸಾಂ), ಏ.28-ಈಶಾನ್ಯ ರಾಜ್ಯದ ಕಾಮರೂಪ್ ಜಿಲ್ಲೆಯ ಮಿರ್ಜಾದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೆÇಲೀಸರು ಕಳುವಾಗಿದ್ದ 1.2 ಕೋಟಿ ರೂ.ಮೌಲ್ಯದ ಸಿಗರೇಟ್ ಮತ್ತು ಗುಟ್ಕಾ ಹಾಗೂ 20 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಗರೇಟ್ ಮತ್ತು ಗುಟ್ಕಾ ತುಂಬಿದ್ದ ವಾಹನ ಅಗರ್ತಲಾಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾಲಿನೊಂದಿಗೆ ವಾಹನವನ್ನೂ ಅಪಹರಿಸಿದ್ದರು.
ಈ ಸಂಬಂಧ ಮಣಿ ತಾಲೂಕ್‍ದಾರ್ ಮತ್ತು ಅಯಿದೂರ್ ರೆಹಮಾನ್ ಎಂಬುವರನ್ನು ಬಂಧಿಸಲಾಗಿದೆ.