ಅಭ್ಯರ್ಥಿ ಶಾಸಕ ರಹೀಮ್‍ಖಾನ್ ಕ್ಷೇತ್ರ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ಪ್ರಚಾರ

ಕೆಲಸ ನೋಡಿ ಮತ ಕೊಡಿ
ಬೀದರ, ಏ. 28:- ಬೀದರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ರಹೀಮ್‍ಖಾನ್ ಕ್ಷೇತ್ರ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ಶನಿವಾರ ಮಿಂಚಿನ ಪ್ರಚಾರ ನಡೆಸಿದರು.

ರಾಜನಾಳ, ಮಮದಾಪುರ, ವಿಳಾಸಪುರ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.
ನನಗೆ ದೊರೆತ ಅಲ್ಪ ಅವಧಿಯಲ್ಲಿ ಬೀದರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರಗತಿಗೆ ಸಮಾನ ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.

ಮತದಾರರು ನನ್ನ ಕೆಲಸ ನೋಡಿ ಮತ ಕೊಡಬೇಕು. ಮತ್ತೊಮ್ಮೆ ಅವಕಾಶ ಕಲ್ಪಿಸಿದರೆ ಅಭಿವೃದ್ಧಿಗೆ ಇನ್ನೂ ಅಧಿಕ ಮೊತ್ತವನ್ನು ತಂದು ಕ್ಷೇತ್ರವನ್ನು ಮಾದರಿ ಮಾಡುವ ಕನಸು ನನ್ನದಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ