ಔರಾದ್ ಕ್ಷೇತ್ರದ ವಿವಿಧೆಡೆ ಮಿಂಚಿನ ಪ್ರಚಾರ
ಶಾಸಕ ಪ್ರಭು ಚವ್ಹಾಣ್ ಮತಬೇಟ
ಬೀದರ್, ಏ. 28- ಜಿಲ್ಲೆಯ ಔರಾದ್ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಪ್ರಭು ಚವ್ಹಾಣ್ ಶನಿವಾರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸಿದರು.
ಕ್ಷೇತ್ರದ ಸಂತಪುರ, ಬೋರಾಳ, ತುಳಜಾಪುರ, ಎಕಲಾರ, ಬರದಾಪುರ, ಬೆಲ್ದಾರ್, ಚೌದ್ರಿ ಬೆಳಕುಣಿ, ರಕ್ಷಾಳ (ಬಿ) ರಕ್ಷಾಳ (ಕೆ), ಕೊಟಗ್ಯಾಳ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಪ್ರಭು ಚವ್ಹಾಣ್, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಪಕ್ಕಾ. ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಪಂ ಸದಸ್ಯ ಅನಿಲ ಗುಂಡಪ್ಪ , ಪ್ರಮುಖರಾದ ಸತೀಶ್ ಪಾಟೀಲ್, ಮಾರುತಿ, ರಮೇಶ , ಕಾಶಿನಾಥ ಜಾಧವ, ಕಿರಣ ಪಾಟೀಲ್, ಅಬ್ದಜ್ ಪಠಾಣ, ಸಚಿನ್ ರಾಠೋಡ್ ಇತರರಿದ್ದರು