ಲಖಿಂಪುರ್ ಖೇರಿ(ಯುಪಿ), ಏ.28-ವ್ಯಾನ್ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಒಂಭತ್ತು ಮಂದಿ ಮೃತಪಟ್ಟು, ಇತರ ಏಳು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಪಸ್ಗಾವನ್ ಪೆÇಲೀಸ್ ಠಾಣೆ ವ್ಯಾಪ್ತಿಯ ಉಚೌಲಿಯಾ ಗ್ರಾಮದ ಬಳಿ ಇಂದು ಮುಂಜಾನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ-24ರಲ್ಲಿ ಇಂದು ಬೆಳಗ್ಗೆ 6ರ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿತು. 16 ಜನರಿದ್ದ ಟಾಟಾ ಮ್ಯಾಜಿಕ್ ವ್ಯಾನ್ ಅತಿವೇಗವಾಗಿ ಹಿಂಬದಿಯಿಂದ ಟ್ರಕ್‍ಗೆ ಅಪ್ಪಳಿಸಿತು. ವ್ಯಾನ್ ಚಾಲಕ ಮತ್ತು ಕ್ಲೀನರ್ ಸೇರಿದಂತೆ ಒಂಭತ್ತು ಮಂದಿ ಮೃತಪಟ್ಟಿರು.
ಏಳು ಗಾಯಾಳುಗಳನ್ನು ಶಹಜಾನ್‍ಪುರ್‍ನಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ವ್ಯಾನ್ ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣ ಎಂದು ಪೆÇಲೀಸರು ತಿಳಿಸಿದ್ದಾರೆ.