ವ್ಯಾಪಕ ಮತ್ತು ಫಲಪ್ರದ ಮಾತುಕತೆ! – ಪ್ರಧಾನಿ ನರೇಂದ್ರ ಮೋದಿ

ವುಹಾನ್, ಏ.28-ಎರಡು ದಿನಗಳ ಔಪಚಾರಿಕ ಮಾತುಕತೆಯ ಮೊದಲ ಸುತ್ತಿನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಜೊತೆ ತಾವು ವ್ಯಾಪಕ ಮತ್ತು ಫಲಪ್ರದ ಮಾತುಕತೆ ನಡೆಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವುಹಾನ್‍ನಲ್ಲಿ ಅಧ್ಯಕ್ಷ ಜಿನ್‍ಪಿಂಗ್ ಅವರನ್ನು ಭೇಟಿಯಾಗಿದ್ದು ನನಗೆ ತುಂಬಾ ಸಂತೋಷ ನೀಡಿದೆ. ನಾವು ವ್ಯಾಪಕ ಮತ್ತು ಫಲಪ್ರದ ಮಾತುಕತೆ ನಡೆಸಿದೇವು. ಭಾರತ-ಚೀನಾ ಸಂಬಂಧಗಳನ್ನು ಬಲಗೊಳಿಸುವ ಬಗ್ಗೆ ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡೆವು ಹಾಗೂ ಅಂತಾರಾಷ್ಟ್ರೀಯ ವಿಷಯಗಳು ಕುರಿತು ಸಮಾಲೋಚನೆ ನಡೆಸಿದೆವು ಎಂದು ಮೋದಿ ಚೀನಾದ ಜನಪ್ರಿಯ ಸಾಮಾಜಿಕ ಮಾಧ್ಯಮ ವೀಬ್‍ನಲ್ಲಿ ತಿಳಿಸಿದ್ದಾರೆ. ಈ ಸೋಷಿಯಲ್ ಮೀಡಿಯಾದಲ್ಲಿ ಮೋದಿಗೆ 1,83,122 ಅನುಯಾಯಿಗಳು ಮತ್ತು ಅಭಿಮಾನಿಗಳಿದ್ಧಾರೆ.
ಹುಬೀ ಪ್ರಾಂತ್ಯದ ವಸ್ತು ಸಂಗ್ರಹಾಲಯದಲ್ಲಿ ನನ್ನೊಂದಿಗೆ ವೈಯಕ್ತಿಕವಾಗಿ ಜೊತೆಯಾಗಿದ್ದಕ್ಕೆ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರಿಗೆ ಧನ್ಯವಾದಗಳು. ಈ ಮ್ಯೂಸಿಯಂದ ಚೀನಾ ಇತಿಹಾಸ ಮತ್ತು ಸಂಸ್ಕøತಿ ಪ್ರತಿಬಿಂಬಿಸುವ ದೊಡ್ಡ ಕಲಾಭಂಡಾರವಾಗಿದೆ ಎಂದು ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.
ವುಹಾನ್‍ನಲ್ಲಿ ರಾತ್ರಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಉಭಯ ನಾಯಕರು ಪಾಲ್ಗೊಂಡರು. ಬಾಲಿವುಡ್ ಸಂಗೀತ ಈ ಸಮಾರಂಭದ ವಿಶೇಷವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ