ಬೀಜಿಂಗ್, ಏ.28-ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಮಕ್ಕಳ ಮೇಲೆ ಚೂರಿಯಿಂದ ದಾಳಿ ನಡೆಸಿದ ಹಂತಕನೊಬ್ಬ ಏಳು ವಿದ್ಯಾರ್ಥಿಗಳನ್ನು ಹತ್ಯೆ ಮಾಡಿದ ಬೀಕರ ಘಟನೆ ಉತ್ತರ ಚೀನಾದಲ್ಲಿ ಶುಕ್ರವಾರ ನಡೆದಿದೆ. ಹತ್ಯೆಯಾದ ಮಕ್ಕಳು 12 ರಿಂದ 15ರ ವಯೋಮಾನದವರು. ಇರಿತಕ್ಕೆ ಒಳಗಾದ ಇತರ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಆರೋಪಿಯನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಬರ್ಬರ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಈ ಘಟನೆಯಿಂದ ಪೆÇೀಷಕರು ದಿಗ್ಭ್ರಮಗೆ ಒಳಗಾಗಿದ್ದಾರೆ. ಚೀನಾದಲ್ಲಿ ನಡೆದ ಅತ್ಯಂತ ಭೀಕರ ಕಗ್ಗೊಲೆ ಇದಾಗಿದೆ.
ಚೀನಾದಲ್ಲಿ ಮರುಕಳಿಸುತ್ತಿರುವ ಇಂಥ ಕಗ್ಗೊಲೆ ಪ್ರಕರಣಗಳಿಂದ ನಾಗರಿಕರು ಬೆಚ್ಚಿಬಿದ್ದಿದ್ಧಾರೆ. ಕಳೆದ ಫೆಬ್ರವರಿಯಲ್ಲಿ ಶಾಪಿಂಗ್ ಮಾಲೊಂದರ ಮೇಲೆ ದಾಳಿ ಮಾಡಿದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ಕೊಂದು ಕೆಲವರನ್ನು ಗಾಯಗೊಳಿಸಿದ್ದ.