ಅಖಿಲೇಶ್ ಯಾದವ್ ಮತ್ತು ಮಾಯವತಿ ಅವರ ಭೇಟಿ ರಾಜಕೀಯ ಪ್ರವಾಸೋದ್ಯಮ – ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ

ಲಕ್ನೋ, ಏ.28-ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕಕ್ಕೆ ಉತ್ತರ ಪ್ರದೇಶದ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷದ ಮುಖಂಡರಾದ ಅಖಿಲೇಶ್ ಯಾದವ್ ಮತ್ತು ಮಾಯವತಿ ಅವರ ಭೇಟಿಯು ರಾಜಕೀಯ ಪ್ರವಾಸೋದ್ಯಮ ಎಂದು ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಲೇವಡಿ ಮಾಡಿದ್ದಾರೆ.
ಈ ಇಬ್ಬರನ್ನು ನೋಡಲು ಕರ್ನಾಟಕದ ಜನತೆ ಸಿದ್ಧವಾಗಿಲ್ಲ. ಬದಲಿಗೆ ರಾಜ್ಯದ ವಿವಿಧೆಡೆ ಚುನಾವಣಾ ಪ್ರವಾಸದಲ್ಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ನೋಡಲು ಬಯಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಸ್‍ಪಿ ಮತ್ತು ಬಿಎಸ್‍ಪಿ ಕೀಳುಮಟ್ಟದ ರಾಜಕೀಯ ನಡೆಸುತ್ತಿದೆ. ಅಖಿಲೇಶ್ ಮತ್ತು ಮಾಯವತಿ ಅವರ ಚುನಾವಣಾ ಪ್ರಚಾರವು ಕೇವಲ ರಾಜಕೀಯ ಪ್ರವಾಸವಾಗುತ್ತದೆ. ಈ ಎರಡೂ ಪಕ್ಷಗಳಿಗೂ ಸಾಂಸ್ಥಿಕ ದೃಢತೆ ಇಲ್ಲ. ಹೀಗಾಗಿ ಇವರ ಪ್ರವಾಸ ಮತ್ತು ಪ್ರಚಾರ ಫ್ಲಾಪ್ ಶೋ ಆಗುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕರ್ನಾಟಕದಲ್ಲಿ ಇವೆರಡೂ ಪಕ್ಷಗಳಿಗೆ ಅಸ್ತಿತ್ವವೇ ಇಲ್ಲ. ಇವರು ಪ್ರಚಾರ ಗಿಟ್ಟಿಸಲು ಪ್ರವಾಸ ಮಾಡುತ್ತಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗದು ಎಂದು ತ್ರಿಪಾಟಿ ಟೀಕಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ