ಅಜ್ಮೀರ್, ಏ.28-ಹನ್ನೆಡರು ವರ್ಷಗಳ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣದಂಡನೆ ವಿಧಿಸುವ ಕಾನೂನು ಜಾರಿಗೆ ಬಂದಿದ್ದರೂ, ಹೆದರದೇ ಕಾಮುಕರು ಕುಕೃತ್ಯ ಮುಂದುವರಿಸಿದ್ದಾರೆ.
ರಾಜಸ್ತಾನದ ಅಜ್ಮೀರ್‍ನಲ್ಲಿ ದೇವಸ್ಥಾನವೊಂದರ ಅರ್ಚಕನೊಬ್ಬ ಏಳು ವರ್ಷ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ವರದಿಯಾಗಿದೆ.
ಅಜ್ಮೀರ್ ಹೊರವಲಯದ ಕಲ್ಯಾಣಿಪುರ ಬೆಟ್ಟದಲ್ಲಿರುವ ಕಲಿಜಾಟ್ ಹನುಮಾನ್ ದೇವಸ್ಥಾನದ ಅರ್ಚಕ ಸ್ವಾಮಿ ಶಿವಾನಂದ ಅಲಿಯಾಸ್ ಬಲ್ವಂತ್(48) ಎಂಬಾತ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ದೇವಸ್ಥಾನದ ಬಳಿ ನಿಂತಿದ್ದ ಬಾಲಕಿಯನ್ನು ಕರೆದೊಯ್ಯ ಕಾಮುಕ ಅರ್ಚಕ ಕೊಠಡಿಯೊಂದರಲ್ಲಿ ಕೂಡು ಹಾಕಿ ಅತ್ಯಾಚಾರ ಎಸಗಿ ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಬಾಲಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ ತಂದೆಗೆ ದೇಗುಲದ ಕೊಠಡಿಯಲ್ಲಿ ಆಕೆ ಪ್ರಜ್ಞಾಶೂನ್ಯಳಾಗಿ ಬಿದ್ದಿರುವುದು ಕಂಡು ಬಂದಿತು. ನಂತರ ಬಾಲಕಿ ಅರ್ಚಕನ ಕೃತ್ಯ ಬಗ್ಗೆ ತಂದೆಗೆ ತಿಳಿಸಿದರು. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಅರ್ಚಕನ ಪತ್ತೆಗಾಗಿ ಬಲೆ ಬೀಸಿದ್ಧಾರೆ.