ಮೈಸೂರು, ಏ.28- ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನಾಂಕವಾದ ಮಾ.27ರಿಂದ ಏ.26ರವರೆಗೆ ನಗರ ಸೇರಿದಂತೆ ಮೈಸೂರಿನಾದ್ಯಂತ 80,48,232 ರೂ. ಮೌಲ್ಯದ 15, 375 ಲೀಟರ್ ವಿವಿಧ ಮಾದರಿಯ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಿಲಿಟರಿ ಹೋಟೇಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸುತ್ತಿದ್ದವರ ವಿರುದ್ಧ 286 ಪ್ರಕರಣಗಳನ್ನು ದಾಖಲಿಸಿ 280 ಮಂದಿಯನ್ನು ಬಂಧಿಸಿ 34 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.