ಬ್ಯಾಟರಾಯಣಪುರದ ಬಿಜೆಪಿ ಅಭ್ಯರ್ಥಿ ಏ ರವಿ ಪರ ಸಂಸದ ಸದಾನಂದ ಗೌಡರ ಮತಯಾಚನೆ

ಬೆಂಗಳೂರು ಏ26: ಇಂದು ಬೆಳಗ್ಗೆ ಹುಣಸೆಮಾರನ ಹಳ್ಳಿಯ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಮಾಜಿ ಮುಖ್ಯ ಮಂತ್ರಿಗಳಾದ ಸದಾನಂದ ಗೌಡರು ಮತ್ತು ಚಕ್ರಪಾಣಿಯವರು ವಾರ್ಡ್ ನಂಬರ್ ೮ ರಲ್ಲಿ ಮತ ಪ್ರಚಾರ ಮಾಡಿದರು. ಸದಾನಂದ ಗೌಡರು ಮತ್ತು ಚಕ್ರಪಾಣಿಯವರೊಂದಿಗೆ ಅಶ್ವಥನಾರಾಯಣ ಗೌಡ ಹಾಗೂ ಶ್ರೀನಿವಾಸ್ ಕೆಂಪೇಗೌಡರೂ ಇದ್ದು ಜನರನ್ನು ಉದ್ದೇಶಿಸಿ ಮಾತನಾಡಲಾಯಿತು.

ಸಂಜೆ ಡಾ.ಜಗನಾಥ್ ಜೋಡೀದಾರ್ ಮತ್ತು ಹೇಮಂತ್ ಜೋಡೀದಾರ್ ರವರನ್ನು ಬಿಜೆಪಿ ಗೆ ಸೇರ್ಪಡೆಯಾದರು. ಹಾಗೆಯೇ ಸನ್ಮಾನ್ಯ ಶ್ರೀ ಸದಾನಂದ ಗೌಡರಿಗೆ ಶ್ರೀಯುತ ಪ್ರೊಫೆಸರ್ ಗುರುಸ್ವಾಮಿ ಯವರಿಂದ ಸನ್ಮಾನ ಮಾಡಲಾಯಿತು.

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ