ಮೇ 15 ರಂದು ಮುಂದಿನ 5 ವರ್ಷಗಳ ಕಾಲ ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರ ಪಡಯುತ್ತದೆ ಎಂದು ತಿಳಿಯಲಿದೆ

ಬೆಂಗಳೂರು, ಏ.27- ಮೇ 12 ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು , ಒಂದೇ ಹಂತದ ಮತದಾನ ನಡೆಯಲಿದೆ. ಮೇ 15 ರಂದು ಮುಂದಿನ 5 ವರ್ಷಗಳ ಕಾಲ ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರ ಪಡಯುತ್ತದೆ ಎಂದು ತಿಳಿಯಲಿದೆ.

2019ರ ಲೋಕಸಭಾ ಚುನಾವಣೆ ಹಿನ್ನೆ¯ಯಲ್ಲಿ ಕರ್ನಾಟಕ ಚುನಾವuಯ ಫಲಿತಾಂಶ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಅತಿ ಮುಖ್ಯವಾಗಿದೆ. ಆದರೆ ಎರಡೂ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಗಮನಿಸಿದರೆ ಇಲ್ಲಿನ ಅರ್ಧದಷ್ಟು ಅಭ್ಯರ್ಥಿಗಳು ರಾಜಕೀಯದಲ್ಲಿ ತೊಡಗಿಸಿಕೊಳ್ಳುವಲ್ಲಿ ಗಂಭೀರವಾಗಿ ಚಿಂತಿಸುತ್ತಿಲ್ಲ ಎಂಬುವುದನ್ನು ಗಮನಿಸಬಹುದು.

ಚುನಾವಣಾ ಆಯೋಗದ ಅನಯ ಕರ್ನಾಟಕದ ಒಟ್ಟು 4.96 ಕೋಟಿ ಮತದಾರರ ಪೈಕಿ, ಸುಮಾರು 2.44 ಕೋಟಿ ಮಹಿ¼ಯರಿದ್ದಾರೆ. ಅಂದರೆ ಮತ ಚಲಾಯಿಸುವವರಲ್ಲಿ ಶೇ. 49ರಷ್ಟು ಮಂದಿ ಸ್ತ್ರೀಯರೆ ಆಗಿದ್ದಾರೆ. ಹೀಗಿದ್ದರೂ ಎರಡೂ ಬಹು ದೊಡ್ಡ ಪಕ್ಷಗಳು ಮಹಿ¼ಯರಿಗೆ ನೀಡಿರುವ ಗಮನಿಸಿದರೆ ಕಾಂಗ್ರೆಸ್ ಕೇವಲ 16 ಮಂದಿ ಮಹಿ¼ಯರಿಗೆ ಟಿಕೆಟ್ ನೀಡಿದೆ.

ಇನ್ನು ಇತ್ತ ಬಿಜೆಪಿ 6 ಹಾಗೂ ಜೆಡಿಎಸ್ 4(126 ಸೀಟುಗಳಲ್ಲಿ) ಸ್ತ್ರೀಯರಿಗೆ ಟಿಕೆಟ್ ನೀಡಿದೆ. ಟಿಕೆಟ್ ವಿಚಾರದಲ್ಲಿ ಶೇ. 49 ರಷ್ಟು ಮಹಿಳಾ ಮತದಾರರಿದ್ದರೂ ಕೇವಲ ಶೇ. 7 ರಷ್ಟು ಮಂದಿ ಪ್ರತಿನಿಧಿಗಳಾಗಲು ಅರ್ಹರೆಂದು ಕಾಂಗ್ರೆಸ್ ಭಾವಿಸಿದರೆ, ಬಿಜೆಪಿ ಹಾಗೂ ಜೆಡಿಎಸ್ ಈ ವಿಚಾರದಲ್ಲಿ ಇನ್ನೂ ಇಳಿಕೆಯಾಗಿದೆ. ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಅವರಿಗೆ ಪ್ರತಿನಿಧಿಸುವ ಅವಕಾಶವನ್ನು ನೀಡುವ ಕುರಿತಾಗಿ ಗಮನವಹಿಸಬೇಕು ಎಂಬುದು ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿಯವರ ಅಭಿಪ್ರಾಯ.

5 ಜಿಲ್ಲೆಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚು!: ಕರ್ನಾಟಕದ ಒಟ್ಟು 30 ಜಿಲ್ಲೆಗಳ ಪೈಕಿ 5 ಜಿಲ್ಲೆಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ರಾಯಚೂರು, ಉಡುಪಿ, ರಾಮನಗರ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಚುನಾವಣಾ ಆಯೋಗದ ಅನಯ ಮೈಸೂರು ಇಲಾSಯಲ್ಲಿ ಮಹಿಳಾ ಮತದಾರರ ಸಂಖ್ಯೆ ಶೇ. 50ಕ್ಕಿಂತ ಹೆಚ್ಚಿದೆ, ಹೀಗಿದ್ದರೂ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳು ಮಹಿ¼ಯರಿಗೆ ಟಿಕೆಟ್ ನೀಡುವಲ್ಲಿ ಒಲವು ತೋರಿಲ್ಲ.

2013ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವuಯನ್ನು ಗಮನಿಸಿದರೆ, ಇಲ್ಲಿನ ಚುನಾವಣಾ ಇತಿಹಾಸದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವುದು ಕಂಡು ಬರುತ್ತದೆ. ಒಟ್ಟು 2,945 ಅಭ್ಯರ್ಥಿಗಳ ಪೈಕಿ 175 ಮಂದಿ ಮಹಿ¼ಯರು ಚುನಾವuಯಲ್ಲಿ ಸ್ಪರ್ಧಿಸಿದ್ದು, ಇದು ಶೇ.6ರ ಆಸುಪಾಸಿನಲ್ಲಿತ್ತು. ಇವರಲ್ಲಿ ಕೇವಲ 6 ಮಂದಿ ಮಹಿ¼ಯರು ಮಾತ್ರ ಚುನಾವuಯಲ್ಲಿ ಗೆದ್ದಿದ್ದರೆಂಬುವುದು ಮತ್ತಷ್ಟು ಅಚ್ಚರಿ ಮೂಡಿಸುವ ವಿಚಾರವಾಗಿದೆ.

ಸೆಪ್ಟೆಂಬರ್ 2017ರವರೆಗೆ ಸಿದ್ದರಾಮಯ್ಯರನವರ ಕ್ಯಾಬಿನೆಟ್‍ನಲ್ಲಿ ಉಮಾಶ್ರೀಯಷ್ಟೇ ಏಕೈಕ ಮಹಿಳಾ ಮಂತ್ರಿಯಾಗಿದ್ದರು. ಗುಂಡ್ಲುಪೇಟೆ ಉಪ ಚುನಾವuಯಲ್ಲಿ ಗೆಲುವು ಸಾಧಿಸಿದ ಬಳಿಕ ಗೀತಾ ಮಹಾದೇವ ಪ್ರಸಾದ್?ಗೆ ಮಂತ್ರಿ ಸ್ಥಾನ ನೀಡಲಾಯಿತು. 2008-13ರವರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು,

ಆಗಲೂ ಕೇವಲ ಒಬ್ಬ ಮಹಿಳೆ ಮಾತ್ರ ಮಂತ್ರಿಯಾಗಿದ್ದರು. ಇನ್ನು ಇಲ್ಲಿನ ರಾಜಕೀಯ ಇತಿಹಾಸದ ಮೇಲೆ ದೃಷ್ಟಿ ಹಾಯಿಸಿದರೆ ಕ್ಯಾಬಿನೆಟ್‍ನಲ್ಲಿ ಕೇವಲ ಹೆಸರಿಗಷ್ಟೇ ಮಹಿಳಾ ಮಂತ್ರಿ ಇರುವುದು ದಶಕದಿಂದ ನಡೆದುಕೊಂಡು ಬಂದಿದೆ.

ಕರ್ನಾಟಕ ವಿಧಾನಸಭಾ ಚುನಾವuಯಲ್ಲಿ 1962 ರಲ್ಲಿ ಅತಿ ಹೆಚ್ಚು. ಅಂದರೆ ಒಟ್ಟು 18 ಮಂದಿ ಮಹಿ¼ಯರು ಚುನಾಯಿತರಾಗಿದ್ದರು. ಇದಕ್ಕೂ ಮೊದಲು 1957ರಲ್ಲಿ 13 ಮಂದಿ ಹಾಗೂ 1994 ರಲ್ಲಿ 10 ಮಹಿ¼ಯರು ಗೆಲುವು ಸಾಧಿಸಿದ್ದರು. ಕಳೆದ ಮೂರು ಲೋಕಸಭಾ ಚುನಾವuಯನ್ನು ಗಮನಿಸಿದರೆ 2004ರಲ್ಲಿ ಇಬ್ಬರು, 2009 ರಲ್ಲಿ ಒಬ್ಬರು ಹಾಗೂ 2014ರಲ್ಲೂ ಒಬ್ಬ ಮಹಿಳಾ ಅಭ್ಯರ್ಥಿ ಚುನಾಯಿತರಾಗಿ ಲೋಕಸಭೆಗೆ ಎಂಟ್ರಿ ಪಡೆದಿದ್ದರು.
ಟಿಕೆಟ್ ಸಿಕ್ಕವರು ಯಾರು?

ಮಹಿ¼ಯರಿಗೆ ಟಿಕೆಟ್ ನೀಡುವ ವಿಚಾರದಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಹಿರಿಯ ನಾಯಕರ ಪತ್ನಿ ಹಾಗೂ ಮಕ್ಕಳಿಗಷ್ಟೇ ಸ್ಪರ್ಧಿಸುವ ಅವಕಾಶ ಕಲ್ಪಿಸಿದೆ. ಕಾಂಗ್ರೆಸ್ ಪಕ್ಷವು ಮಹದೇವ ಪ್ರಸಾದ್ ಹಾಗೂ ಕಮರುಲ್ ಇಸ್ಲಾಂರವರ ಪತ್ನಿಯರಿಗೆ ಮತ್ತು ರುದ್ರೇಶ್ ಗೌಡರ ಮಗಳಿಗೆ ಟಿಕೆಟ್ ನೀಡಿದೆ.ಅಲ್ಲದೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಗಳು ಸೌಮ್ಯಾ ರೆಡ್ಡಿಗೆ ಜಯನಗರದ ಅಭ್ಯರ್ಥಿಯಾಗಿ ಪಕ್ಷದಿಂದ ಟಿಕೆಟ್ ನೀಡಿದೆ. ಇದನ್ನು ಹೊರತುಪಡಿಸಿ ಕೆ.ಎಚ್.ಮುನಿಯಪ್ಪನವರ ಮಗಳು ರೂಪಾ ಶಶಿಧರ್‍ಗೂ ಟಿಕೆಟ್ ನೀಡಿದೆ.

 

ಬಿಜೆಪಿ ಮಹಿಳಾ ಅಭ್ಯರ್ಥಿಗಳು
ಶಶಿಕಲಾ ಜೊಲ್ಲೆ- ನಿಪ್ಪಾಣಿ
ರೂಪಾಲಿನಾಯಕ್- ಕಾರವಾರ
ವೈ.ಎಸ್. ಅಶ್ವಿನಿ- ಕೆಜಿಎಫ್ (ಎಸ್ಸಿ)
ಸುಶೀಲಾ ದೇವರಾಜ್-ಪುಲಿಕೇಶಿನಗರ
ಪೂರ್ಣಿಮಾ ಶ್ರೀನಿವಾಸ್- ಹಿರಿಯೂರು
ಶ್ವೇತಾ ಗೋಪಾಲ್- ಕೃಷ್ಣರಾಜನಗರ
ಲೀಲಾವತಿ-ಕನಕಪುರ

ಕಾಂಗ್ರೆಸ್ ಅಭ್ಯರ್ಥಿಗಳು
ಸೌಮ್ಯೆರೆಡ್ಡಿ- ಜಯನಗರ
ಗೀತಾ ಮಹಾದೇವಪ್ರ ಸಾದ್- ಗುಂಡ್ಲುಪೇಟೆ
ರೂಪಾ ಶಶಿಧರ್- ಕೆಜಿಎಫ್
ಕೀರ್ತನಾ ರುದ್ರೇಶ್‍ಗೌಡ- ಬೇಲೂರು
ಜಿ. ಪದ್ಮಾವತಿ- ರಾಜಾಜಿನಗರ
ಸುಷ್ಮಾ ಗೋಪಾಲರೆಡ್ಡಿ- ಬೊಮ್ಮನಹಳ್ಳಿ
ಶಕುಂತಲಾ ಶೆಟ್ಟಿ- ಪುತ್ತೂರು
ಶಾರದಾ ಮೋಹನ್‍ಶೆಟ್ಟಿ- ಕುಮ್ಮಟ
ಮೋಟಮ್ಮ- ಮೂಡಿಗೆರೆ
ವಾಣಿಕೃಷ್ಣರೆಡ್ಡಿ- ಚಿಂತಾಮಣಿ
ಲಕ್ಮೀ ಹೆಬ್ಬಾಳ್ಕರ್- ಬೆಳಗಾವಿ ಗ್ರಾಮಾಂತರ
ಅಂಜಲಿ ನಿಂಬಾಳ್ಕರ್- ಖಾನಪುರ
ಫಾತಿಮಾ ಖಮರುಲ್ ಇಸ್ಲಾಂ- ಕಲಬುರಗಿ ಉತ್ತರ
ಕೆ.ಪಿ.ಚಂದ್ರಕಲಾ-ಮಡಿಕೇರಿ
ಉಮಾಶ್ರೀ-ತೆರೆದಾಳ

ಜೆಡಿಎಸ್ ಮಹಿಳಾ ಅಭ್ಯರ್ಥಿಗಳು
ಶೀಲಾ ನಾಯಕ್- ಮಾಯಕೊಂಡ
ಶಾರದಾ ಪೂರ್ಯನಾಯಕ್- ಶಿವಮೊಗ್ಗ ಗ್ರಾಮಾಂತರ (ಎಸ್ಸಿ)
ಸುಶೀಲಾ ಬಾಯಿ ಕೊರವಿ- ಚಿಂಚೋಳಿ (ಎಸ್ಸಿ)
ಸುನೀತಾ- ಸೇಡಂ
ಸುಮತಿ ಎಸ್, ಹೆಗ್ಡೆ- ಬೆಳ್ತಂಗಡಿ
ಮಂಜುಳಾ ಡಿ.ಎಂ ರವಿ- ಕನಕಗಿರಿ (ಎಸ್ಸಿ)
ಮಂಗಳಾದೇವಿ ಎಸ್. ಬಿರದಾರ್- ಮುದ್ದೇಬಿಹಾಳ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ