ಬೆಂಗಳೂರು ,ಏ.27- ಮತದಾನ ಹೆಚ್ಚಳಕ್ಕೆ ಪ್ರಯತ್ನಿಸುತ್ತಿರುವ ಚುನಾವಣಾ ಆಯೋಗ 18 ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಚುನಾವಣಾ ದಿನದಂದು ಮತದಾನಕ್ಕಾಗಿ ಕಡ್ಡಾಯ ರಜೆ ನೀಡಲು ಮಾಲೀಕರಿಗೆ ಸೂಚಿಸಬೇಕೆಂದು ಕರ್ನಾಟಕ ವರ್ಕರ್ಸ್ ಯೂನಿಯನ್ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಗಣಪತಿ ಹೆಗಡೆ,ರಾಜ್ಯದ 18 ವಲಯದಲ್ಲಿ ಲಕ್ಷಾಂತರ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಮತದಾನದ ದಿನದಂದು ಮಾಲೀಕರು ರಜೆ ನೀಡದ ಕಾರಣ ಮತದಾನದಿಂದ ವಂಚಿತರಾಗುತ್ತಿದ್ದಾರೆ.
ಈ ಕುರಿತು ಚುನಾವಣಾ ಆಯೋಗ ಮಾಲೀಕರಿಗೆ ಸೂಚನೆ ನೀಡಬೇಕು. ರಜೆ ನೀಡಿದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ವಿಶ್ವ ಕಾರ್ಮಿಕರ ದಿನಾಚರuಯನ್ನು ಮೇ 1ಕ್ಕೆ ಬೆಳಗ್ಗೆ 9.30ಕ್ಕೆ ಕಾಪೆರ್Çೀರೇಷನ್ ವೃತ್ತದಲ್ಲಿರುವ ಬನಪ್ಪ ಪಾರ್ಕ್ನಲ್ಲಿ ಬಹಿರಂಗ ಸ¨sಯನ್ನು ಆಯೋಜಿಸಲಾಗಿದೆ. ಮಿನರ್ವ ವೃತ್ತದಿಂದ ಸಹಸ್ರಾರು ಕೆಂಪು ಸಮವಸ್ತ್ರ ಧರಿಸಿ ಕಾರ್ಮಿಕ ಆಕರ್ಷಕ ಮೆರವಣಿUಯು ಜೆಸಿರಸ್ತೆಯ ಮೂಲಕ ಬನ್ನಪ್ಪ ಪಾರ್ಕ್ಗೆ ಸೇರಲಿದೆ. ಈ ಮೆರವಣಿUಯಲ್ಲಿ ಪೀಣ್ಯ, ನೆಲಮಂಗಲ, ಎಲೆಕ್ಟ್ರಾನಿಕ್ ಸಿಟಿ, ಬೋಮಸಂದ್ರ ಅತ್ತಿಬೆ, ಜಿಗಣಿ ಕೈಗಾರಿಕಾ ಪ್ರದೇಶಗಳು ಹಾಗೂ ರಾಮನಗರ ಜಿಲ್ಲೆಯ ಬಿಡದಿ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.