ಬೆಂಗಳೂರು ,ಏ.27-ಕರ್ನಾಟಕ ರಾಜ್ಯ ಹಳ್ಳಿಕಾರ ಯುವಕರ ಸಂಘದ ವತಿಯಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಬೆಳಕು ಎಂಬ ಶೈಕ್ಷಣಿಕ ಕೌನ್ಸಲಿಂಗ್ ಕಾರ್ಯಕ್ರಮವನ್ನು ಇದೇ 29ರಂದು ಮಾಗಡಿ ರಸ್ತೆ ದಾಸರಹಳ್ಳಿಯಲ್ಲಿರುವ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಹೆಸರಾಂತ ವ್ಯಕ್ತಿಗಳು ಎಸ್ಎಸ್ಎಲ್ಸಿ ಮತ್ತು ನಂತರ ಶೈಕ್ಷಣಿಕ ಅವಕಾಶಗಳು ಮತ್ತು ಪೂರ್ವ ಸಿದ್ದತೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲಿದ್ದಾರೆ. ವಿದ್ಯಾರ್ಥಿಗಳ ಜೊತೆಗೆ ಪೆÇೀಷಕರೊಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು.
ಕಾರ್ಯಕ್ರಮದಲ್ಲಿ 200 ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಿದ್ದು ದೂರದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಶಿಕ್ಷಣ ತಜ್ಞ ಬೇದ್ರೆ ಮಂಜುನಾಥ್ ಅವರು ರಚಿಸಿರುವ ಶೈಕ್ಷಣಿಕ ಮಾರ್ಗದರ್ಶಿ ಕೈಪಿಡಿಯೊಂದನ್ನು ಉಚಿತವಾಗಿ ನೀಡಲಾಗುವುದು.
ಕಾರ್ಯಕ್ರಮದ ಉದ್ಘಾಟ£ಯನ್ನು ಜನಾಂಗದ ಗಣ್ಯರಾದ ಕೆ.ಎಂ.ನಾಗರಾಜು ಮತ್ತು ನ್ಯಾಯವಾದಿಗಳಾದ ನಾಗಯ್ಯನವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೈಕ್ಷಣಿಕ ತರಬೇತುದಾರ ಡಾ.ಗೋವಿಂದರಾಜ್, ಮಕ್ಕಳ ಶೈಕ್ಷಣಿಕ ತರಬೇತುದಾರ ಹಾಗೂ ರಂಗಭೂಮಿ ನಿರ್ದೇಶಕ ಡಾ.ಪಂಚಾಕ್ಷರಿ ಹಿರೇಮಠ್ , ಖ್ಯಾತ ಹಿಂದೂಸ್ತಾನಿ ಗಾಯಕ ಜಿ.ಕೆ.ಶಿವಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.
ಭಾಗವಹಿಸುವ ಆಸಕ್ತಿ ವಿದ್ಯಾರ್ಥಿಗಳು ಹೆಚ್ಚಿನ ವಿವರಗಳಿಗಾಗಿ 9632141411, 9035751371ಗೆ ಸಂಪರ್ಕಿಸಿ.