ಬೆಂಗಳೂರು,ಏ.27-ವಿಧಾನಸಭೆ ಚುನಾವಣೆ ಹಿನ್ನೆ¯ಯಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಸುಳ್ಳಿನ ಕಂತೆ. ಇದನ್ನು ರಾಜ್ಯದ ಪ್ರತಿಯೊಬ್ಬ ಮತದಾರನಿಗೂ ಮನವರಿಕೆ ಮಾಡಿಕೊಡುತ್ತೇವೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದ್ದಾರೆ.
ಸುಳ್ಳಿನ ಕಂvಯನ್ನು ಸೃಷ್ಟಿ ಮಾಡಲು ಪ್ರೇರೇಪಿಸಿದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಾಬಾ. ನಿದ್ದೆಯ ಮಂಪರಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಕನಸಿನಲ್ಲೇ ಓಕೆ ಅಂದಿದ್ದಾರೆ. ಕಾಂಗ್ರೆಸ್ನ ಬೂಟಾಟಿಕೆ ನಡೆವುದಿಲ್ಲ ಎಂದು ಅವರು ವಾಗ್ದಾಳಿ ಮಾಡಿದರು.
ಸುಳ್ಳುಗಳ ಸರದಾರ ಸಿದ್ದು ಸರ್ಕಾರ. ಕಾಂಗ್ರೆಸ್ ಪ್ರಣಾಳಿPಯ ಕ್ರಾಸ್ಚೆಕ್ ಎಂಬ ಶೀರ್ಷಿPಯುಳ್ಳ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅನಂತ್ಕುಮಾರ್, ಕಳೆದ ಐದು ವರ್ಷಗಳ ಅವಧಿಯಲ್ಲಿ ನಾವು ಜನತೆಗೆ ಏನು ಮಾಡಿದ್ದೇವೆ ಎಂಬುದನ್ನು ವಿವರಿಸಲು ಕಾಂಗ್ರೆಸ್ ಸಂಪೂರ್ಣವಾಗಿ ವಿಫಲವಾಗಿದೆ. ಪೆÇಳ್ಳು ಭರವಸೆಗಳನ್ನೇ ಜನತೆಗೆ ನೀಡಲು ಮುಂದಾಗಿದ್ದಾರೆ. ಇವರ ಕಟ್ಟುಕvಯನ್ನು ಜನ ನಂಬುವುದಿಲ್ಲ ಎಂದು ಟೀಕಿಸಿದರು.
ಈ ಹಿಂದೆ 2013ರಲ್ಲಿ ಚುನಾವಣೆ ಮುನ್ನ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಹೇಳಲಾಗಿದೆ. ಹಾಗಾದರೆ ಎಲ್ಲ ಭರವಸೆಗಳು ಈಡೇರಿದ್ದರೆ ಕಾಂಗ್ರೆಸ್ ಮತ್ತೆ ಯಾವ ಕಾರಣಕ್ಕಾಗಿ ಪ್ರಣಾಳಿಕೆ ಬಿಡುಗಡೆ ಮಾಡಬೇಕಿತ್ತು ಎಂದು ಪ್ರಶ್ನಿಸಿದರು.
ಕರ್ನಾಟಕ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕೇವಲ ಜಾಹಿರಾತು ಮತ್ತು ಬಾಯಿಯಲ್ಲಿ ಮಾತ್ರ ಮುಂದಿದೆ. ಇಂಧನ ಮತ್ತು ವಿದ್ಯುತ್ ಪೂರೈPಯಲ್ಲಿ ಜನತೆಗೆ ಶಾಕ್ ನೀಡಿದೆ ಎಂದು ವಾಗ್ದಾಳಿ ನಡೆಸಿದರು.
ಕಣ್ಣಿಗೆ ಮಣ್ಣೆರಚಿ ಮರಳು ಮಾಡಿದ ಸರ್ಕಾರ, ನೈಸ್ ವರದಿ ಧೂಳು ತಿನ್ನಲು ಕಾರಣಕರ್ತರಾಗಿದ್ದು ಯಾರು? ಕಸ ಪ್ರೇರೇಪಿಸುವುದೇ ನಗರಾಭಿವೃದ್ಧಿ, ಶಿಕ್ಷಣವನ್ನು ಕುಲಗೆಡಿಸಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದರು.
ಸೇವಾ ವಂಚಿತ ಆರೋಗ್ಯ ಸರ್ಕಾರ ಅವೈಜ್ಞಾನಿಕ ವಿತರಣೆ ಆಹಾರ ಭದ್ರತೆ ನೀತಿ, ಸಂಸ್ಕøತಿ, ಪ್ರವಾಸೋದ್ಯಮಕ್ಕೂ ಇಲ್ಲ ಪೆÇ್ರೀ ಕಮೀಷನ್ ನಿಗದಿಯೇ ಕಾಂಗ್ರೆಸ್ನ ಸಮಾಜ ಕಲ್ಯಾಣ. ಅಲ್ಪಸಂಖ್ಯಾತರ ಒಳಿತಿಗೆ ಅಲ್ಪವೂ ಮಾಡದ ಸರ್ಕಾರ ಎಂದು ಕುಹುಕವಾಡಿದರು.
ಕಾಂಗ್ರೆಸ್ನ ಕಿರುಕುಳ, ಪೆÇಲೀರ ಕಳವಳ, ಸಿದ್ದು ಸರ್ಕಾರ ಸುಳ್ಳು ಜಾಹಿರಾತುಗಳ ಸರದಾರ ಎಂದು ಲೇವಡಿ ಮಾಡಿದರು.
ಜನಾರ್ಧನ ರೆಡ್ಡಿ ಬಗ್ಗೆ ಈಗಾಗಲೇ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ಈ ವಿಚಾರಕ್ಕೆ ಒತ್ತು ಕೊಡುವುದು ಬೇಡ ಎಂದು ಅನಂತಕುಮಾರ್ ಮನವಿ ಮಾಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಳ್ಳಾರಿ ಪ್ರವಾಸ ರದ್ದು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅನಂತಕುಮಾರ್, ಅವರು ರಾಷ್ಟ್ರೀಯ ಅಧ್ಯಕ್ಷರು. ದೇಶದ ಯಾವುದೇ ಭಾಗಕ್ಕೆ ಹೋಗಲು ಸರ್ವಸ್ವತಂತ್ರರು ಎಂದರು.
ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಮಾತನಾಡಿ, ರೈತರ ಬಗ್ಗೆಯಾಗಲಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ 53 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ರೈತರ ಬಗ್ಗೆ ಈ ಮೊಸಳೆ ಕಣ್ಣೀರು ಸುರಿಸುತ್ತಿದೆ.ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿ ಎಸಿಬಿ ರಚಿಸಿದ್ದು ಯಾರು ಎಂದು ಪ್ರಶ್ನಿಸಿದರು.