ದೇಶದಲ್ಲಿ ಪ್ರತಿ ದಿನ 18 ವರ್ಷಗಳ ಕೆಳಗಿನ ಕನಿಷ್ಠ 29 ಮಕ್ಕಳು ರಸ್ತೆ ಅಪಘಾತಗಳಲ್ಲಿ ಮೃತ!

ನವದೆಹಲಿ, ಏ.27-ದೇಶದಲ್ಲಿ ಪ್ರತಿ ದಿನ 18 ವರ್ಷಗಳ ಕೆಳಗಿನ ಕನಿಷ್ಠ 29 ಮಕ್ಕಳು ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿದ್ದು, ಅವರಲ್ಲಿ ಬಹುತೇಕ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ ಎಂಬುದು ಸರ್ಕಾರಿ ಅಂಕಿ-ಅಂಶ ಮಾಹಿತಿಯಿಂದ ಬಹಿರಂಗವಾಗಿದೆ.
ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ದೆಹಲಿಯಲ್ಲಿ ಕಳೆದ ಒಂದು ತಿಂಗಳಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಗಳು ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ದೊಡ್ಡ ಆತಂಕ ಸೃಷ್ಟಿಸಿದೆ.
ರಸ್ತೆ ಅಪಘಾತಗಳಲ್ಲಿ 18 ವರ್ಷಗಳಿಗಿಂತ ಕಡಿಮೆ ವಯೋಮಾನದವರು ಮೃತಪಟ್ಟ ಅಂಕಿ-ಅಂಶಗಳ ಮಾಹಿತಿ ಆತಂಕಕಾರಿಯಾಗಿದೆ. 2016ರ ಮಾಹಿತಿ ಪ್ರಕಾರ, ಹರಿಯಾಣದಲ್ಲಿ ಇಂಥ ಅಪಘಾತಗಳು ಹೆಚ್ಚಾಗಿ ಸಂಭವಿಸಿವೆ. ಅಲ್ಲಿ 1.452 ಮಕ್ಕಳನ್ನು ರಸ್ತೆ ಅವಘಡಗಳು ಆಪೆÇೀಶನ ತೆಗೆದುಕೊಂಡಿವೆ. ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ ಅಲ್ಲಿ 1,393 ಶಾಲಾ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಇಂಥ ಅಪಘಾತಗಳಲ್ಲಿ ಬಹುತೇಕ ಮಕ್ಕಳ ವಾಹನ ಚಾಲಕರ ನಿರ್ಲಕ್ಷತೆಯೇ ಕಾರಣ ಎನ್ನಲಾಗಿದೆ. ಉತ್ತರ ಪ್ರದೇಶದ ಖುಷಿನಗರದಲ್ಲಿ ನಿನ್ನೆ ಮಾನವ ರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಸಂಭವಿಸಿದ ರೈಲು ಮತ್ತು ಶಾಲಾ ವ್ಯಾನ್ ಡಿಕ್ಕಿಯಲ್ಲಿ 13 ಮಕ್ಕಳು ದುರಂತ ಸಾವಗೀಡಾದ ಪ್ರಕರಣ ಬೆಚ್ಚಿ ಬೀಳಿಸಿದೆ.
ಶಾಲಾ ವಾಹನ ಚಾಲಕ ಮೊಬೈಲ್ ಫೆÇೀನ್‍ನಲ್ಲಿ ಮಾತನಾಡುತ್ತಿದ್ದಾಗ ಈ ಅಪಘಾತ ಸಂಭವಿಸಿತು ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸಾರಿಗೆ ಸಚಿವ ನಿತಿನ್ ಗಡ್ಕರಿ, ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿಯಿಂದ ತಾವೂ ತೊಂದರೆಗೆ ಒಳಗಾಗಿ ಇತರರನ್ನು ಅಪಾಯಕ್ಕೀಡು ಮಾಡುತ್ತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.
ಮಾನವ ರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಎಚ್ಚರಿಕೆ ವ್ಯವಸ್ಥೆಯನ್ನು ಅಳವಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ