ವಿವಾಹ ಮಹೋತ್ಸವದಲ್ಲಿ ಸಿಹಿ ಸೇವಿಸಿ 45 ಮಂದಿ ಅಸ್ವಸ್ಥ!

ಬಲ್ಲಿಯಾ(ಯುಪಿ), ಏ.27-ಮದುವೆ ಮ£ಯಲ್ಲಿ ಸಿಹಿ ಸೇವಿಸಿ 45 ಮಂದಿ ಅಸ್ವಸ್ಥರಾದ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಬೈರಿಯಾ ತಹಶೀಲ್‍ನ ರಾಮ್‍ಪುರ ಗ್ರಾಮದಲ್ಲಿ ಸಂಭವಿಸಿದೆ.  ನಿನ್ನೆ ರಾತ್ರಿ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಸಿಹಿ ವಿತರಿಸಲಾಯಿತು. ನಂತರ 45ಕ್ಕೂ ಹೆಚ್ಚು ಮಂದಿ ವಾಂತಿ-ಬೇಧಿಯಿಂದ ನಿತ್ರಾಣಗೊಂಡರು ಅವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ