
ಬೆಂಗಳೂರು, ಏ.27-ಮುಂದಿನ ತಿಂಗಳು 12ರಂದು ನqಯುವ ರಾಜ್ಯ ವಿಧಾನಸಭೆ ಚುನಾವuಯಲ್ಲಿ ಮತದಾರರ ಗುರುತಿಗೆ ಸಂಬಂಧಪಟ್ಟಂತೆ ಕೇಂದ್ರ ಚುನಾವಣಾ ಆಯೋಗವು ಪರಿಗಣಿಸಬಹುದಾದ 12 ಪರ್ಯಾಯ ಗುರುತುಪತ್ರಗಳ ಬಗ್ಗೆ ಆದೇಶ ನೀಡಿದೆ. ಇದರಿಂದಾಗಿ ಮತದಾರರಲ್ಲಿ ಉಂಟಾಗಿರುವ ಗೊಂದಲ ನಿವಾರಣೆಯಾದಂತಾಗಿದೆ.
ಭಾರತ ಚುನಾವಣಾ ಆಯೋಗವು ಈಗಾಗಲೇ ಎಲ್ಲ ಮತದಾರರಿಗೆ ಭಾವಚಿತ್ರವಿರುವ ಗುರುತು ಪತ್ರಗಳನ್ನು(ಇಪಿಐಸಿ) ನೀಡಿದೆ. ಮತಗಟ್ಟೆಗಳಲ್ಲಿ ಮತ ಚಲಾಯಿಸುವುದಕ್ಕೂ ಮುನ್ನ ಮತದಾರರು ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ತೋರಿಸಬೇಕಾಗುತ್ತದೆ.
ಮತದಾರರು ತಮ್ಮ ಗುರುತು ಸಾಬೀತು ಮಾಡಲು ಇಪಿಐಸಿ ಹಾಜರುಪಡಿಸದಿದ್ದಲ್ಲಿ, ತಾನು ಆದೇಶದಲ್ಲಿ ತಿಳಿಸಿರುವ 12 ಪರ್ಯಾಯ ಗುರುತು ಪತ್ರಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ಆನಂತರ ಮತ ಚಲಾಯಿಸಲು ಆಯೋಗ ಅವಕಾಶ ನೀಡಿದೆ.
12 ಪರ್ಯಾಯ ಐಡಿಗಳು ಯಾವುವು?
ಪಾಸ್‍ಪೆÇೀರ್ಟ್, ವಾಹನ ಚಾಲನಾ ಪರವಾನಗಿ(ಡಿಎಲ್), ಕೇಂದ್ರ/ರಾಜ್ಯ ಸರ್ಕಾರ, ಸಾರ್ವಜನಿಕ ವಲಯ ಸಂಸ್ಥೆಗಳು/ಖಾಸಗಿ ನಿಯಮಿತ ಸಂಸ್ಥೆಗಳಿಂದ ಉದ್ಯೋಗಿಗಳಿಗೆ ನೀಡಲಾದ ಭಾವಚಿತ್ರವಿರುವ ಸೇವಾ ಗುರುತು ಪತ್ರ,ಗಳು, ಬ್ಯಾಂಕ್/ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್‍ಬುಕ್‍ಗಳು, ಪ್ಯಾನ್ ಕಾರ್ಡ್, ಎನ್‍ಪಿಆರ್ ಅಡಿ ಆರ್‍ಜಿಐನಿಂದ ನೀಡಲಾದ ಸ್ಮಾರ್ಟ್ ಕಾರ್ಡ್, ಎಂಜಿನರೇಗಾ ಉದ್ಯೋಗ ಚೀಟಿ, ಕಾರ್ಮಿಕ ಸಚಿವಾಲಯ ಯೋಜನೆ ಅಡಿ ನೀಡಲಾದ ಆರೋಗ್ಯ ವಿಮಾ ಸ್ಮಾಟ್ ಕಾರ್ಡ್, ಭಾವಚಿತ್ರದೊಂದಿಗೆ ಪಿಂಚಣಿ ದಾಖಲೆಪತ್ರ, ಚುನಾವಣಾ ಆಯೋಗದಿಂದ ನೀಡಲಾದ ದೃಢೀಕೃತ ಭಾವಚಿತ್ರವಿರುವ ಮತದಾರರ ಚೀಟಿ, ಸಂಸದರು/ಶಾಸಕರಿಗೆ ನೀಡಲಾದ ಅಧಿಕೃತ ಗುರುತು ಚೀಟಿಗಳು ಹಾಗೂ ಆಧಾರ್ ಕಾರ್ಡ್‍ಗಳು.
ಮತ ಕೇಂದ್ರಗಳಲ್ಲಿ ತಮ್ಮ ಹಕ್ಕು ಚಲಾಯಿಸುವುದಕ್ಕೂ ಮುನ್ನ ಇಪಿಐಸಿ ಇಲ್ಲದಿದ್ದರೆ ಮತದಾರರ ಈ 12 ಗುರುತು ಚೀಟಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮತದಾನಕ್ಕೆ ಸಿಬ್ಬಂದಿ ಅವಕಾಶ ನೀಡಬಹುದು ಎಂದು ಚುನಾವಣಾ ಆಯೋಗವು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅವರಿಗೆ ನೀಡಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಮತದಾನ ಸಂದರ್ಭದಲ್ಲಿ ಐಪಿಇಸಿ ಕಡ್ಡಾಯ. ಅದು ಇಲ್ಲದಿದ್ದರೆ ಹಕ್ಕು ಚಲಾಯಿಸಲು ಅವಕಾಶ ನೀಡುವುದಿಲ್ಲ ಎಂಬ ಬಗ್ಗೆ ಮತದಾರರಲ್ಲಿ ಉದ್ಭವಿಸಿರುವ ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ಆಯೋಗ ಈ ಆದೇಶದ ಪ್ರತಿ ನೀಡಿ ಪಾಲಿಸುವಂತೆ ನಿರ್ದೇಶನ ನೀಡಿದೆ.