
ಕೋಲಾರ, ಏ.26-ಕೌಟುಂಬಿಕ ಕಲಹದಿಂದ ಮನನೊಂದ ಗೃಹಿಣಿ ತನ್ನಿಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶ್ರೀನಿವಾಸಪುರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗೊಟ್ಟೆಕುಂಟೆ ನಿವಾಸಿಗಳಾದ ಕನಕ (26), ಮಕ್ಕಳಾದ ಅಮೃತ(6) ಮತ್ತು ಜಯಂತಿ (3) ಮೃತಪಟ್ಟ ನತದೃಷ್ಟರು.
ಗೊಟ್ಟೆಕುಂಟೆಯ ನಿವಾಸಿ ನರಸಿಂಹರೆಡ್ಡಿ ಏಳು ವರ್ಷಗಳ ಹಿಂದೆ ಕನಕ ಎಂಬುವರನ್ನು ವಿವಾಹವಾಗಿದ್ದು, ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ನಿನ್ನೆ ರಾತ್ರಿಯೂ ಸಹ ದಂಪತಿ ನಡುವೆ ಯಾವುದೋ ವಿಚಾರವಾಗಿ ಜಗಳ ನಡೆದಿದೆ. ನಂತರ ಪತಿ ನಿದ್ರೆಗೆ ಜಾರಿದ್ದಾಗ ಮಧ್ಯರಾತ್ರಿ ಕನಕ ಎದ್ದು ತನ್ನಿಬ್ಬರು ಕರುಳಕುಡಿಗಳನ್ನು ಕರೆದುಕೊಂಡು ಹೊರಗೆ ಹೋಗಿ ಕೃಷಿ ಹೊಂಡಕ್ಕೆ ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಮುಂಜಾನೆ ಈ ವಿಷಯ ಬೆಳಕಿಗೆ ಬಂದಿದೆ.
ತಕ್ಷಣ ಶ್ರೀನಿವಾಸಪುರ ಠಾಣೆ ಪೆÇಲೀಸರು ಸ್ಥಳಕ್ಕಾಗಮಿಸಿ ಕೃಷಿ ಹೊಂಡದಿಂದ ಮೂವರ ಶವಗಳನ್ನು ಮೇಲಕ್ಕೆತ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.