ಥಾಣೆ, ಏ.26-ಬಹು ಕೋಟಿ ರೂ.ಗಳ ಮಾದಕ ವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಆರೋಪಿ ಮತ್ತು ಬಾಲಿವುಡ್ ಮಾಜಿ ತಾರೆ ಮಮತಾ ಕುಲಕರ್ಣಿಗೆ ಸೇರಿದ 20 ಕೋಟಿ ರೂ.ಗಳ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ವಿಶೇಷ ನ್ಯಾಯಾಲಯ ಇಂದು ಆದೇಶ ನೀಡಿದೆ.
ಥಾಣೆ ಪೆÇಲೀಸರು 2016ರಲ್ಲಿ 2,000 ಕೋಟಿ ರೂ.ಗಳ ಡ್ರಗ್ಸ್ ಜಾಲವನ್ನು ಭೇದಿಸಿದ್ದರು. ಈ ಕಳ್ಳಸಾಗಣೆ ಜಾಲದಲ್ಲಿ ಬಾಲಿವುಡ್ ಖ್ಯಾತ ನಟಿಯಾಗಿದ್ದ ಮಮತಾ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದಳು. ಕುಖ್ಯಾತ ಡ್ರಗ್ಸ್ ಲಾರ್ಡ್ ವಿಕ್ಕಿ ಗೋಸ್ವಾಮಿ ಜೊತೆ ಶಾಮೀಲಾಗಿ ಈಕೆ ವ್ಯವಸ್ಥಿತ ದಂಧೆ ನಡೆಸಿದ್ದಳು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಮತಾ ಮತ್ತು ವಿಕ್ಕಿ (ಇಬ್ಬರಿಬ್ಬರು ಸತಿ-ಪತಿ ಎನ್ನಲಾಗಿದೆ) ಆಫ್ರಿಕಾದ ಕೀನ್ಯಾಕ್ಕೆ ಪರಾರಿಯಾಗಿದ್ದರು.
ಇವರಿಬ್ಬರನ್ನು ಘೋಷಿತ ಅಪರಾಧಿಗಳೆಂದು ಘೋಷಿಸಲಾಗಿತ್ತು.
ವಿಶೇಷ ಎನ್ಡಿಪಿಎಸ್ ಕೋರ್ಟ್ ನ್ಯಾಯಾಧೀಶ ಎಚ್.ಎಂ. ಪಟವರ್ಧನ್ ಮುಂಬೈನ ವಿವಿಧ ಸ್ಥಳಗಳಲ್ಲಿರುವ ಮಮತಾಗೆ ಸೇರಿದ 20 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಫ್ಲಾಟ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿದ್ದಾರೆ.