ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯದ ಮೂವರು ಶಾಸಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ:

ನವದೆಹಲಿ,ಏ.26- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯದ ಮೂವರು ಶಾಸಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು.
ರಾಜಾಜಿನಗರದ ಶಾಸಕ ಎಸ್.ಸುರೇಶ್‍ಕುಮಾರ್, ನಿಪ್ಪಾಣಿಯ ಶಶಿಕಲಾ ಜೊಲ್ಲೆ ಹಾಗೂ ಕಾರ್ಕಳದ ಸುನೀಲ್‍ಕುಮಾರ್ ಅವರಿಗೆ ಪ್ರಧಾನಿಯನ್ನು ಪ್ರಶ್ನೆ ಕೇಳುವ ಅವಕಾಶ ಒದಗಿ ಬಂದಿತು.
ಮೊದಲು ಶಶಿಕಲಾ ಜೊಲ್ಲೆ ಅವರು ಪ್ರಧಾನಿ ಮೋದಿಗೆ ರೈತರ ಕಲ್ಯಾಣ ಕುರಿತಂತೆ ಕೇಳಲಾದ ಪ್ರಶ್ನೆಗೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಅದರಲ್ಲಿ ಫಸಲ್ ಭೀಮಾಯೋಜನೆ ಪ್ರಮುಖವಾದುದು. ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶ ಎಂದು ಉತ್ತರಿಸಿದರು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಅಲ್ಲಿನ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಯಾವುದೇ ಸರ್ಕಾರ ಅನ್ನದಾತನನ್ನು ಮರೆಯಬಾರದು. ನೀವು ರೈತರಿಗೆ ಎಷ್ಟು ಅನುಕೂಲ ಮಾಡಿಕೊಡುತ್ತೀರೋ ಅದು ಪರೋಕ್ಷವಾಗಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಬೆಂಗಳೂರು ನಗರ ಕುರಿತಂತೆ ಸುರೇಶ್ ಕುಮಾರ್ ಕೇಳಿದ ಮತ್ತೊಂದು ಪ್ರಶ್ನೆಗೆ , ಕರ್ನಾಟಕ ಎಂದರೆ ನೆನಪಾಗುವುದೇ ಬೆಂಗಳೂರು. ಇಂದು ಬೆಂಗಳೂರು ವಿಶ್ವದ ಮಾನ್ಯತೆ ಪಡೆದ ನಗರವಾಗಿದೆ. ಈ ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಆಡಳಿತಾರೂಢ ಸರ್ಕಾರ ಇಂಥ ನಗರವನ್ನು ಕಡೆಗಣಸಿರುವುದು ಸರಿಯಲ್ಲ ಎಂದು ಪ್ರಧಾನಿ ಆಕ್ಷೇಪಿಸಿದರು.
ಇನ್ನು ಕಾರ್ಯಕರ್ತರ ಬಗ್ಗೆ ಕಾರ್ಕಳದ ಸುನೀಲ್‍ಕುಮಾರ್ ಕೇಳಿದ ಪ್ರಶ್ನೆಗೆ ಯಾವುದೇ ಪಕ್ಷಕ್ಕೆ ಕಾರ್ಯಕರ್ತರು ಆಧಾರಸ್ತಂಭ. ನೀವು ಎಲ್ಲಿಯ ತನಕ ಕಾರ್ಯಕರ್ತರನ್ನು ಪೆÇ್ರೀ ಅಲ್ಲಿಯ ತನಕ ಗೆಲ್ಲಲು ಸಾಧ್ಯವಿದೆ. ಬೂತ್ ಮಟ್ಟವನ್ನು ಗೆದ್ದರೆ ಚುನಾವಣೆಯನ್ನು ಗೆದ್ದಂತೆ ಕ್ಷೇತ್ರದಲ್ಲಿ ಇದ್ದ ದಿನ ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಬೇಕು. ಅವರನ್ನು ಮರೆತರೆ ಪಕ್ಷಕ್ಕೂ ಭವಿಷ್ಯವಿಲ್ಲ. ನಿಮಗೂ ಭವಿಷ್ಯವಿಲ್ಲ .ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ ಎಂಬುದನ್ನು ಮರೆಯಬಾರದು ಎಂದು ಮೋದಿ ಕಿವಿಮಾತು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ