ಎಂಇಪಿ ಅಭ್ಯರ್ಥಿಗಳಿಗೆ ಅಡ್ಡಿ, ಕೋರ್ಟ್ ನಲ್ಲಿ ಹೋರಾಟ- ನೌಹೀರಾ ಶೇಕ್

ಬೆಂಗಳೂರು,ಏ. 25:  ಎಂಇಪಿ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡದೆ ಅಡ್ಡಿಪಡಿಸಿದವರ ವಿರುದ್ಧ ಕೋರ್ಟ್ ಮೆಟ್ಟಿಲು ಏರುವುದಾಗಿ ಎಂಇಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್
 ಹೇಳಿದ್ದಾರೆ.

ಬೆಂಗಳೂರಿನ ಹೊಟೇಲ್ ಲೀಲಾ ಪ್ಯಾಲೇಸ್ ನಲ್ಲಿ ಇಂದು ನಡೆದ ಸುದ್ಧಿಗೋಷ್ಠಿ ಯಲ್ಲಿ ಮಾತನಾಡಿದ ಅವರು,
ಕೆಲವು ಕಡೆ ನಡೆದಿರುವ ಘಟನೆಗಳನ್ನು ನೋಡಿದರೆ ಸರ್ವಾಧಿಕಾರಿ ವರ್ತನೆ ಕಂಡುಬಂದಿದೆ ಇದನ್ನು ಬಲವಾಗಿ ಖಂಡಿಸುತ್ತೇನೆ.

ನಿನ್ನೆ ರಾಜ್ಯದ ಐದು ಕಡೆಗಳಲ್ಲಿ ಎಂಇಪಿ ಅಭ್ಯರ್ಥಿಗಳು ನಾಮಪತ್ರಸಲ್ಲಿಸಲು ಅವಕಾಶ ಸಿಕ್ಕಿಲ್ಲ ಇದರ ವಿರುದ್ಧ
ಪಕ್ಷ ಮುಖ್ಯಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ ಎಂದರು.

ಯಾವ ಕಾರಣಕ್ಕಾಗಿ ಎಂಇಪಿ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ ಎಂಬುದರ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ವಿವರ ನೀಡುವುದಾಗಿ ರಾಜ್ಯ ಮುಖ್ಯಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಭರವಸೆ ಕೊಟ್ಟಿದ್ದಾರೆ.

ಅವರು ನೀಡುವ ವರದಿ ಆಧಾರದ ಮೇಲೆ ಎಂಇಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅಡ್ಡಿಪಡಿಸಿದವರ ವಿರುದ್ಧ ನ್ಯಾಯಲಯದಲ್ಲಿ ಮೊಕದ್ದಮೆ ದಾಖಲು ಮಾಡುವುದಾಗಿ ಅವರು ಹೇಳಿದರು.

ನಿನ್ನೆ ಬೆಳಗಾವಿ, ತುಮಕೂರಿನ ತುರುವೆಕೆರೆ, ಶಿರಾ, ಕೋಲಾರ ಜಿಲ್ಲೆಯ ಮಾಲೂರು, ರಾಮನಗರ ಜಿಲ್ಲೆಯ ಕನಕಪುರದಲ್ಲಿ ಎಂಇಪಿ ಅಭ್ಯರ್ಥಿಗಳು ನಾಮಪ್ತರ ಸಲ್ಲಿಸಲು ಕೆಲವರು ಅಡ್ಡಿಪಡಿಸಿದ್ದಾರೆ ಇದಕ್ಕೆ ಕಾರಣಾರದವರ  ವಿರುದ್ಧ ಅಗತ್ಯ ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ ಎಂದರು.

ದುಡ್ಡಿಯಿಲ್ಲದವರು, ಬಡವರು, ರೈತರು, ಕೂಲಿಕಾರರು ವಿಧಾನಸಭೆಗೆ ಮತ್ತು ಲೋಕಸಭೆಗೆ ಆಯ್ಕೆಯಾಗಿ ಬರಬೇಕು ಎಂಬ ಉದ್ದೇಶದಿಂದ ಎಂಇಪಿ ಸಮಾಜದ ಎಲ್ಲ ವರ್ಗ, ಸಮುದಾಯದವರಿಗೆ ಟಿಕೆಟ್ ಕೊಟ್ಟಿದೆ

ಬಿಜೆಪಿ ಪಟ್ಟಿಯನ್ನು ನೋಡಿದರೆ ಅವರು ಹೇಳುವ ಸಭ್ ಕಾ ಸಾತ್ ಸಬ್ ಕಾ ವಿಕಾಸ್ ನೀತಿ ಏನು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ, ಬಿಜೆಪಿ ಹೇಳುವುದೊಂದು ಮಾಡುವುದೊಂದು ಎಂಬುದು ಎಲ್ಲರಿಗೂ ಮನವರಿಕೆ ಆಗಿದೆ ಎಂದರು ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಾ, ಲಂಡನ್, ದುಬೈ, ಅಬುದಾಬಿ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ನಗರಗಳಲ್ಲಿ ಭಾಷಣ ಮಾಡುತ್ತಾರೆ ಆದರೆ ಮಹಿಳೆಯರು ಮತ್ತು ಮಕ್ಕಳ ಮೇಲೆ ನಿತ್ಯವೂ ಅತ್ಯಾಚಾರ ಅನಾಚರ ಆಗುತ್ತಿರುವ ಬಗ್ಗೆ ಚಕಾರ ಎತ್ತುವುದಿಲ್ಲ ಇದು ಸರಿಯೇ?ಅವರಿಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನೆ ಮಾಡಿದರು.

ಒಟ್ಟಾರೆ ಎಂಇಪಿ 52 ಮಹಿಳೆಯರಿಗೆ ಟಿಕೆಟ್ ನೀಡಿದೆ ಒಂದೆರೆಡು ದಿನದಲ್ಲಿ ತಾರಾ ಪ್ರಚಾರಕಾರ ಪಟ್ಟಿ ಬಿಡುಗಡೆ ಆಗಲಿದೆ ಇದೇ 26ರಿಂದ ಮೇ 10ರ ವರೆಗೂ ರಾಜ್ಯದ ಉದ್ದಾಗಲಕ್ಕೂ ಪ್ರವಾಸ ಮಾಡುವುದಾಗಿ ಹೇಳಿದರು.

ಅಸೀಫಾ ಖಾನಂ(ಕನಕಪುರ ಎಂಇಪಿಆಭ್ಯರ್ಥಿ) ಹೇಳಿದ್ದೇನು?

ನಾನು ನಿನ್ನೆ 10ಗಂಟೆಗೆ ನಾಮಪತ್ರ ಸಲ್ಲಿಸಲು ಕನಕಪುರ -184 ಚುನಾಚಣಾಧಿಕಾರಿಗಳ ಕಛೇರಿಗೆ ಹೋದೆ ಆದರೆ 3:30ರ ವರೆಗೂ ನನಗೆ ಒಳಗೆ ಹೋಗಿ ನಾಮಪತ್ರ ಸಲ್ಲಿಲು ಅವಕಾಶ ಮಾಡಿಕೊಡಲಿಲ್ಲ ಆದರೆ ಕೆಲವರು ನನ್ನ ಮುಂದೆಯೇ ಚುನಾವಣಾದಿಕಾರಿಗಳಿಗೆ ಫೋನ್ ಮಾಡಿಕೊಂಡು ಯಾರ ಅಡತಡೆ ಇಲ್ಲದೇ ಹೋಗಿ ನಾಮಪತ್ರ ಸಲ್ಲಿಸಿದರು ನಾನು ಕಾಡಿಬೇಡಿದರು ಒಳಗೆ ಹೋಗಲು ಅವಕಾಶ ಕೊಡಲಿಲ್ಲ ಇದೇನು ಸರ್ವಾಧಿಕಾರಿ ಧೋರಣೆಯೇ ಎಂದು ಕಣ್ಣೀರು  ಹಾಕಿದರು. ನಲ್ಲಿ ಹೋರಾಟ- ನೌಹೀರಾ ಶೇಕ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ