ಭೂಸ್ವಾಧೀನ : ಇಚ್ಚಾ ಮರಣ ಕೋರಿ 5,000 ರೈತರ ಅರ್ಜಿ!

ಅಹಮದಾಬಾದ್, ಏ.25-ರಾಜ್ಯ ಸರ್ಕಾರ ಒಡೆತನದ ವಿದ್ಯುತ್ ಘಟಕಕ್ಕೆ ತಮ್ಮ ಜಮೀನನ್ನು ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ಗುಜರಾತ್‍ನ ಭಾವನಗರ ಜಿಲ್ಲೆಯ 5,000ಕ್ಕೂ ಹೆಚ್ಚು ರೈತರು ಇಚ್ಚಾ ಮರಣಕ್ಕೆ ಅನುಮತಿ ಕೋರಿ ಉನ್ನತಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಈ ಪತ್ರದ ಪ್ರತಿಯನ್ನು ರಾಷ್ಟ್ರಪತಿ, ಪ್ರಧಾನಿ ಮತ್ತು ಗುಜರಾತ್ ಮುಖ್ಯಮಂತ್ರಿ ಅವರಿಗೂ ಕಳುಹಿಸಿದ್ದಾರೆ.
ನಾವು ವ್ಯವಸಾಯ ಮಾಡುತ್ತಿರುವ ಫಲವತ್ತಾದ ಕೃಷಿ ಭೂಮಿಯನ್ನು ಗುಜರಾತ್ ಪವರ್ ಕಾಪೆರ್Çರೇಷನ್ ಲಿಮಿಟೆಡ್(ಜಿಪಿಸಿಎಲ್) ಬಲವಂತವಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿವೆ. ಇದರಿಂದ ತೊಂದರೆಗೆ ಒಳಗಾಗಿರುವ ಭಾವನಗರ ಜಿಲ್ಲೆಯ 12 ಗ್ರಾಮಗಳ ಕೃಷಿಕರು ಮತ್ತು ಅವರ ಕುಟುಂಬ ವರ್ಗದವರೂ ಸೇರಿದಂತೆ ಒಟ್ಟು 5,259 ಇಚ್ಚಾ ಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಗುಜರಾತ್ ಖೇದತ್ ಸಮಾಜ್ ಸಂಘಟನೆ ಸದಸ್ಯ ನರೇಂದ್ರ ಸಿಂಹ ಗೋಯೆಲ್ ಹೇಳಿದ್ದಾರೆ.
ರೈತರು ಮತ್ತು ಅವರ ಕುಟುಂಬ ವರ್ಗದವರು ಸಹಿ ಹಾಕಿರುವ ಅರ್ಜಿ ಪತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೂ ಕಳುಹಿಸಿದ್ದಾರೆ. ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು ಎಂದು ರೈತ ಸಂಘಟನೆಗಳು ಆರಂಭಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ