ಬೆಂಗಳೂರು, ಏ.24-ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್ಗಳು ಕಳೆದ 24 ಗಂಟೆಯಲ್ಲಿ 35.82 ಕೋಟಿ ರೂ.ನಗದು, ಸೀರೆ, ವಾಹನ, ಮದ್ಯಗಳನ್ನು ವಶಪಡಿಸಿಕೊಂಡಿವೆ.
ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ರಾಜ್ಯದಲ್ಲಿ 4 ಲಕ್ಷ ಮೌಲ್ಯದ 2 ವಾಹನ, 35.66 ಕೋಟಿ ರೂ. ನಗದು, 1.97 ಕೋಟಿ ರೂ. ಮೌಲ್ಯದ ಮದ್ಯ, 2.76 ಲಕ್ಷ ಮೌಲ್ಯದ ಸೀರೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿವೆ.
ಫ್ಲೈಯಿಂಗ್ ಸ್ಕ್ವಾಡ್ಗಳು 16.50 ಲಕ್ಷ ರೂ. ನಗದು, 10 ಸೀರೆ, 160 ಲ್ಯಾಪ್ಟಾಪ್, ಸಾವಿರ ಲೀಟರ್ಗೂ ಹೆಚ್ಚು ಮದ್ಯ, 93 ವಾಹನಗಳನ್ನು ವಶಪಡಿಸಿಕೊಂಡಿದೆ.
ಫ್ಲೈಯಿಂಗ್ ಸ್ಕ್ವಾಡ್, ಎಸ್ಎಸ್ಟಿ ಹಾಗೂ ಪೆÇಲೀಸ್ ಪ್ರಾಧಿಕಾರಿಗಳಿಂದ ಒಟ್ಟು 39.82 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. 91 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಬಕಾರಿ ಇಲಾಖೆಯು 10,428 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 48.61 ಲಕ್ಷ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ. 78 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.