ಮೇ 20ರಂದು ರೈತರಿಗೆ ನೇರ ಮಾರುಕಟ್ಟೆ ಸೌಲಭ್ಯ

ಬೆಂಗಳೂರು, ಏ.24- ಕರ್ನಾಟಕ ಸಾವಯವ ಕೃಷಿ ಉತ್ಪಾದಕರ ಸೊಸೈಟಿ ವತಿಯಿಂದ ರೈತರಿಗೆ ನೇರ ಮಾರುಕಟ್ಟೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಮೇ 20ರಂದು ಅಗ್ನಿಶಾಮಕ ಠಾಣೆ ಎದುರಿನ ಪಿ.ಕೃಷ್ಣಾರೆಡ್ಡಿ ಮೆಗಾ ಫುಡ್ ಪಾರ್ಕ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಬಿ.ಎಂ.ವಿಶ್ವನಾಥರೆಡ್ಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಯವ ಕೃಷಿ ಉತ್ಪಾದಕರ ಸಂಸ್ಥೆಯು ತೋಟಗಾರಿಕೆಯಲ್ಲಿ ಲಾಭ/ನಷ್ಟದ ಉದ್ದೇಶವಿಲ್ಲದೆ ರೈತರಿಗೆ ಕೃಷಿ ಮಾರ್ಗದರ್ಶನ ತರಬೇತಿ ನೀಡುತ್ತಿದ್ದು, ಈಗ ಮಾವು ಬೆಳೆ ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಾವು ಮಾರುಕಟ್ಟೆ ಕೇಂದ್ರ ಆರಂಭಿಸಲಾಗಿದೆ ಎಂದರು.

ಮಾವು ಬೆಳೆಗಾರರು ನಿಯಮಾನುಸಾರ ಹಾಗೂ ಮಾರಾಟದ ಪ್ರಮಾಣಕ್ಕೆ ಅನುಗುಣವಾಗಿ ಸೇವಾ ಶುಲ್ಕ ಪಾವತಿಸಬೇಕು ಹಾಗೂ ಮಾವು ಖರೀದಿದಾರರು ಸರ್ಕಾರಿ ನಿಯಮಾನುಸಾರ ಶುಲ್ಕ ಪಾವತಿಸಬೇಕು. ರಫ್ತುದಾರರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ತಮಗೆ ಅಗತ್ಯವಿರುವ ಎಲ್ಲ ಜಾತಿಯ ಗುಣಮಟ್ಟದ ಮಾವಿನ ಹಣ್ಣನ್ನು ಖರೀದಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ನಿವೃತ್ತ ತೋಟಗಾರಿಕೆ ಅಧಿಕಾರಿ ಬಿ.ವಿ.ವಿಜಯಕುಮಾರ್ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗೆ 8762201366 ಸಂಪರ್ಕಿಸಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ