
ಕೋಲಾರ, ಏ.24- ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬಿಜೆಪಿ ಅಭ್ಯರ್ಥಿಯ ಇನೋವಾ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಗರದ ಕಟಾರಿಪಾಳ್ಯದಲ್ಲಿ ನಡೆದಿದೆ.
ಅಪರಿಚಿತ ದುಷ್ಕರ್ಮಿಗಳು ಕಳೆದ ರಾತ್ರಿ ಓಂ ಶಕ್ತಿ ಚಲಪತಿ ಅವರ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳೀಯರೊಬ್ಬರು ಇದನ್ನು ನೋಡಿ ತಕ್ಷಣ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಜನರ ಕೂಗಾಟದಿಂದ ಹೊರಗೆ ಬಂದ ಚಲಪತಿ ಅವರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಬೆಂಕಿಯ ಜ್ವಾಲೆಗೆ ಭಾಗಶಃ ಇನೋವಾ ಕಾರು ಸುಟ್ಟು ಹೋಗಿದ್ದು , ಪಕ್ಕದಲ್ಲೇ ನಿಂತಿದ್ದ ಇನೋವಾ ಕಾರಿಗೆ ಬೆಂಕಿ ತಗುಲಿದೆ. ಪಟ್ಟಣದಲ್ಲಿ ಚುನಾವಣಾ ಕಾವು ಜೋರಾಗಿದ್ದು , ಕಾರ್ಯಕರ್ತರ ಚುನಾವಣಾ ಕಾವು ದ್ವೇಷ ರಾಜಕಾರಣಕ್ಕೆ ತಿರುಗತ್ತಿದೆ.
ನಗರ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.