ಜಿದ್ದಾಜಿದ್ದಿನ ರಣರಂಗವಾಗಿದ್ದ ಮೈಸೂರು ಜಿಲ್ಲೆ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉದ್ಯಮಿ ತೋಟದಪ್ಪ ಬಸವರಾಜು:

ಬೆಂಗಳೂರು, ಏ.24- ಜಿದ್ದಾಜಿದ್ದಿನ ರಣರಂಗವಾಗಿದ್ದ ಮೈಸೂರು ಜಿಲ್ಲೆ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉದ್ಯಮಿ ತೋಟದಪ್ಪ ಬಸವರಾಜು ಸ್ಪರ್ಧಿಸಲಿದ್ದಾರೆ.
ಈ ಕ್ಷೇತ್ರದಿಂದ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ನಿನ್ನೆ ಮಧ್ಯಾಹ್ನದಿಂದ ನಡೆದಿರುವ ಕೆಲವು ವಿದ್ಯಾಮಾನಗಳಿಂದ ಕೊನೆ ಕ್ಷಣದಲ್ಲಿ ವರುಣ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಬದಲಾಯಿಸಲಾಯಿತು.
ಇದೀಗ ಬೆಂಗಳೂರು ಮೂಲದ ಉದ್ಯಮಿ ತೋಟದಪ್ಪ ಬಸವರಾಜಪ್ಪ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಬೆಳಗ್ಗೆ ಟಿಕೆಟ್ ನೀಡುವ ಸಂಬಂಧ ಕಾವೇರಿದ ಚರ್ಚೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಜಾವಡೇಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಬೆಂಬಲಿಗರು ವಿಜಯೇಂದ್ರಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದರು. ಆದರೆ ಹೈಕಮಾಂಡ್ ಆದೇಶವನ್ನು ಉಲ್ಲಂಘಿಸಲು ಹಿಂದೇಟು ಹಾಕಿದ ಬಿಎಸ್‍ವೈ, ಪುತ್ರನಿಗೆ ಟಿಕೆಟ್ ನೀಡದಿರುವ ತೀರ್ಮಾನಕ್ಕೆ ಬಂದರು.
ಈ ಮೊದಲು ನಿವೃತ್ತ ಪೆÇಲೀಸ್ ಅಧಿಕಾರಿ ರೇವಣ ಸಿದ್ದಯ್ಯ, ಮೈಸೂರು ರಾಜವಂಶಸ್ಥ ಯದುವೀರ್ ಶ್ರೀಕಂಠದತ್ತ ಒಡೆಯರ್ ಹೆಸರುಗಳು ಕೇಳಿ ಬಂದಿದ್ದವು. ಆದರೆ ಕೊನೆ ಗಳಿಗೆಯಲ್ಲಿ ಅಚ್ಚರಿ ಎಂಬಂತೆ ತೋಟದಪ್ಪ ಬಸವರಾಜು ಹೆಸರು ಅಂತಿಮಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ