ಬಾಗಲಕೋಟೆ,ಏ.24: ಬಾದಾಮಿನೂ ಇಲ್ಲ ಚಾಮುಂಡೇಶ್ವರಿನೂ ಇಲ್ಲ ಯಾವ ಕ್ಷೇತ್ರದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲುವು ಪಡೆದುಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಬಾದಾಮಿಯಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾದಾಮಿಯಲ್ಲಿ ಶ್ರೀರಾಮುಲು ಗೆಲುವು ಖಚಿತ ಈಗ ಜನರೇ ತೀರ್ಮಾನ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿರುವ ಲೋಕಾಯುಕ್ತ ಸಂಸ್ಥೆ ಯ ಕಚ್ಚು ಹಿಸುಕಿದ್ದಾರೆ.ಎಸಿಬಿ ಸ್ಥಾಪಿಸಿದ್ದಾರೆ.ಆದರೆ ಇನ್ನೊಂದು ತಿಂಗಳ ನಂತರ ರಾಜ್ಯ ದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.
ವರುಣಾ ಕ್ಷೇತ್ರದಲ್ಲಿ ನನ್ನ ಮಗ ನಿಲ್ಲುವುದಿಲ್ಲ.ಅಲ್ಲಿ ಬೇರೆಯ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸಲಾಗುವುದು ಎಂದರು.
ಬಿಜೆಪಿ ರಾಷ್ಟ್ರೀಯ ಮುಖಂಡ ಪ್ರಕಾಶ ಜಾವಡೇಕರ್ ಮಾತನಾಡಿ ಸಿದ್ದರಾಮಯ್ಯ ಒಂದು ಕ್ಷೇತ್ರದಿಂದ ಮತ್ತೊಂದು ಚುನಾವಣೆ ಎದುರಿಸುವ ಕಾಲ ಬಂದಿದೆ ಎಂದರೆ ಚಾಮುಂಡೇಶ್ವರಿ ಗೆ ಹೆದರಿ ಬಾದಾಮಿಗೆ ಬಂದಿದ್ದಾರೆ.ಇಲ್ಲಿಯೂ ಬನಶಂಕರಿ ದೇವಿ ಅವರಿಗೆ ಆಶೀರ್ವಾದ ಮಾಡುವುದಿಲ್ಲ ಎಂದರು.