ಬೆಂಗಳೂರು,ಏ.24: ಮೇ 12ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ 8 ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, ಪ್ರತಿಷ್ಠೆಯ ಕಣಗಳಾಗಿ ಮಾರ್ಪಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸ್ಪರ್ಧಿಸಿರುವ ವರುಣಾ ಮತ್ತು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸ್ಪರ್ಧಿಸಿರುವ ಬಾದಾಮಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಗಳನ್ನು ಇನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದೆ.
ಉಳಿದಂತೆ ಶಿರಾದಿಂದ ಎಸ್.ಆರ್. ಗೌಡ, ಅರಸೀಕೆರೆಯಿಂದ ಮರಿಸ್ವಾಮಿ, ಮಂಡ್ಯದಿಂದ ಚಂದಗಾಲು ಶಿವಣ್ಣ, ಸಕಲೇಶ್ವರದಿಂದ ಸೋಮಶೇಖರ್, ಮಧುಗಿರಿಯಿಂದ ರಮೇಶ್ ರೆಡ್ಡಿ, ಶಿಡ್ಲಘಟ್ಟದಿಂದ ಎಚ್. ಸುರೇಶ್, ಮೇಲುಕೋಟೆಯಿಂದ ಶಿವಲಿಂಗೇಗೌಡ ಮತ್ತು ಶ್ರೀನಿವಾಸಪುರದಿಂದ ಡಾ.ವೇಣುಗೋಪಾಲ್ ಅವರನ್ನು ಅಭ್ಯರ್ಥಿಗಳನ್ನಾಗಿ ಬಿಜೆಪಿ ಘೋಷಿಸಿದೆ.