ಬಿಜೆಪಿ ಸ್ಟಾರ್ ಕ್ಯಾಂಪೇನರ್ ಪಟ್ಟಿ ಬಿಡುಗಡೆ

ಬೆಂಗಳೂರು, ಏ.24- ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೆ ಬಿಜೆಪಿಯು ತಾರಾ ಪ್ರಚಾರಕರು (ಸ್ಟಾರ್ ಕ್ಯಾಂಪೇನರ್) ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಒಟ್ಟು 40 ಮಂದಿ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸಹಜವಾಗಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮೊದಲ ಸ್ಥಾನ ಪಡೆದಿದ್ದರೆ, ರಾಜ್ಯದ ವತಿಯಿಂದ ಮೊದಲ 10 ಪಟ್ಟಿಯಲ್ಲಿ ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಸದಾನಂದಗೌಡ ಸ್ಥಾನ ಪಡೆದಿದ್ದಾರೆ.

ಮೊದಲ 10 ಸ್ಥಾನದಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ಗೂ ಸಹ ಸ್ಥಾನ ಕಲ್ಪಿಸಲಾಗಿದೆ. ಉಳಿದಂತೆ ಕೇಂದ್ರ ಸಚಿವರಾದ ರಾಜನಾಥ್‍ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಗಳಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಧ್ಯ ಪ್ರದೇಶದ ಶಿವರಾಜ್‍ಸಿಂಗ್ ಚೌಹಾಣ್, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಮತ್ತಿತರರಿಗೂ ಸ್ಥಾನ ನೀಡಲಾಗಿದೆ.

ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಪಕ್ಷ ಹಾಗೂ ನಾಯಕರಿಗೆ ಮುಜುಗರ ಉಂಟುಮಾಡಿದ್ದ ಉತ್ತರ ಕನ್ನಡದ ಸಂಸದ ಹಾಗೂ ಸಚಿವ ಅನಂತ್‍ಕುಮಾರ್ ಹೆಗಡೆಗೆ 28ನೆ ಸ್ಥಾನ ನೀಡಿದ್ದರೆ, ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣಗೆ 22ನೆ ಸ್ಥಾನ ನೀಡಲಾಗಿದೆ.
ಉಳಿದಂತೆ ಪ್ರಚಾರಕರ ಪಟ್ಟಿ ಈ ಕೆಳಕಂಡಂತಿದೆ:
1. ನರೇಂದ್ರ ಮೋದಿ
2. ಅಮಿತ್ ಷಾ
3. ಬಿ.ಎಸ್.ಯಡಿಯೂರಪ್ಪ
4. ರಾಜನಾಥ್‍ಸಿಂಗ್
5. ಸುಷ್ಮಾ ಸ್ವರಾಜ್
6. ನಿತಿನ್ ಗಡ್ಕರಿ
7. ಡಿ.ವಿ.ಸದಾನಂದಗೌಡ
8. ಅನಂತ್‍ಕುಮಾರ್
9. ನಿರ್ಮಲಾ ಸೀತಾರಾಮನ್
10. ಪ್ರಕಾಶ್ ಜಾವ್ಡೇಕರ್
11. ರವಿಶಂಕರ್ ಪ್ರಸಾದ್
12. ತಾವರ್‍ಚಂದ್ ಗೆಲ್ಹೋಟ್
13. ಸ್ಮೃತಿ ಇರಾನಿ
14. ಪಿಯುಷ್ ಗೋಯಲ್
15. ಯೋಗಿ ಆದಿತ್ಯನಾಥ್
16. ಶಿವರಾಜ್‍ಸಿಂಗ್ ಚೌಹಾಣ್
17. ದೇವೇಂದ್ರ ಫಡ್ನವೀಸ್
18. ರಾಮ್‍ಲಾಲ್ ಜೀ
19. ಪಿ.ಮುರಳಿಧರ್‍ರಾವ್
20. ಪುರಂದರೇಶ್ವರಿ
21. ಬಿ.ಎಲ್.ಸಂತೋಷ್
22. ಎಸ್.ಎಂ.ಕೃಷ್ಣ
23. ಜಗದೀಶ್ ಶೆಟ್ಟರ್
24. ಆರ್.ಅಶೋಕ್
25. ಕೆ.ಎಸ್.ಈಶ್ವರಪ್ಪ
26. ಸಾಧ್ವಿ ನಿರಂಜನ್ ಜ್ಯೋತಿ
27. ರಮೇಶ್ ಜಿಗಜಿಣಗಿ
28. ಅನಂತ್‍ಕುಮಾರ್ ಹೆಗಡೆ
29. ಪ್ರಹ್ಲಾದ್ ಜೋಷಿ
30. ಶ್ರೀರಾಮುಲು
31. ಪಿ.ಸಿ.ಮೋಹನ್
32. ಹೇಮಾಮಾಲಿನಿ
33. ಮನೋಜ್ ತಿವಾರಿ
34. ಅರುಣ್‍ಕುಮಾರ್
35. ಶೋಭಾ ಕರಂದ್ಲಾಜೆ
36. ಎನ್.ರವಿಕುಮಾರ್
37. ಬಿ.ಜಿ.ಪುಟ್ಟಸ್ವಾಮಿ
38. ಡಿ.ಎಸ್.ವೀರಯ್ಯ
39. ತಾರಾ ಅನುರಾಧ
40. ಶೃತಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ