ಭುಬನೇಶ್ವರ್,ಎ.23- ಪ್ರವೇಶ ನಿಷಿದ್ಧವಿದ್ದ ಒಡಿಶಾದ ಕೇಂದ್ರಪುರ ಗ್ರಾಮದಲ್ಲಿರುವ ಮಾ ಪಂಚುಭುರಾಹಿ ದೇವಳದಲ್ಲಿರುವ ಮೂರ್ತಿಗಳನ್ನು ನಮಸ್ಕರಿಸಲು ಹಾಗೂ ದೇವಸ್ಥಾನ ಪ್ರವೇಶಿಸಲು ಪುರಷರಿಗೆ ಅನುಮತಿ ನೀಡಲಾಗಿದೆ.
ಮಾ ಪಂಚಭುರಾಹಿ ತಮ್ಮ ಗ್ರಾಮವನ್ನು ಪ್ರಾಕೃತಿಕ ವಿಪತ್ತಿನಿಂದ ರಕ್ಷಿಸುತ್ತಾಳೆ ಎಂಬ ನಂಬಿಕೆ ಇರುವ ಈ ಗ್ರಾಮದಲ್ಲಿ ಕೇವಲ ವಿವಾಹಿತ ದಲಿತ ಮಹಿಳೆಯರಿಗೆ ಮಾತ್ರ ಮೂರ್ತಿಗಳನ್ನು ಮುಟ್ಟುವ ಹಾಗೂ ಪೂಜೆ ಮಾಡುವ ಅಧಿಕಾರವಿತ್ತು.
ಆದರೆ ದೇವಸ್ಥಾನವಿರುವ ಸತಭಯ ಗ್ರಾಮದಲ್ಲಿ ಏರುತ್ತಿರುವ ಸಮುದ್ರ ಮಟ್ಟದಿಂದಾಗಿ ದೇವಳ ಅಪಾಯದಲ್ಲಿದೆಯೆಂದು ತಿಳಿದು ಅಲ್ಲಿನ ಮೂರ್ತಿಗಳನ್ನು ಸ್ಥಳಾಂತರಿಸಲೆಂದು ಈ ಪುರುಷರಿಗೆ ಒಳಗೆ ಪ್ರವೇಶ ನೀಡಲಾಗಿತ್ತು.
ಒಡಿಶಾ ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣಾ ಪ್ರಾಧಿಕಾರವು ವಿಶ್ವ ಬ್ಯಾಂಕ್ ನೆರವಿನ ಯೋಜನೆಯೊಂದರನ್ವಯ ಸಮುದ್ರ ಕೊರೆತದಿಂದ ಅಪಾಯವೆದುರಿಸುತ್ತಿರುವ ಸತಭಯ ಮುಂತಾದ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದು ಕೇಂದ್ರಪರ ಎಂಬಲ್ಲಿನ ಬಗಪತಿಯ ಎಂಬ ಸ್ಥಳಕ್ಕೆ ಗ್ರಾಮಗಳ ಜನತೆಯನ್ನು ಸ್ಥಳಾಂತರಿಸಲಾಗುತ್ತಿದೆ.