
ಬೆಂಗಳೂರು.ಏ,23- ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಸತ್ಯ ರಾಜಕಾರಣದ ಪಾದಯಾತ್ರೆ ಮತ್ತು ಬೃಹತ್ ಸಾಮಾಜಿಕ ಸಭೆಯನ್ನು ಶಂಕರ್ನಾಗ್ ವೃತ್ತದ ಕೆಂಪೇಗೌಡ ಆಟದ ಮೈದಾನದಲ್ಲಿ ಇದೇ 26ರಂದು ಆಯೋಜಿಸಲಾಗಿದೆ ಎಂದು ಬಸವನಗುಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಭಾನು ಪ್ರಕಾಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಜೆ 4 ಗಂಟೆಗೆ ಸತ್ಯ ರಾಜಕಾರಣ ಪಾದಯಾತ್ರೆ ಹಾಗೂ ಬೃಹತ್ ಸಾರ್ವಜನಿಕ ಸಭೆಯು ಸಂಜೆ 6 ಗಂಟೆಗೆ ಜರುಗಲಿದೆ ಎಂದರು.
ಪ್ರತೀ ವಿಧಾನಸಭೆ ಕ್ಷೇತ್ರದಲ್ಲಿ ಸತ್ಯ, ನಿಷ್ಠೆ, ನಿಸ್ವಾರ್ಥ, ಪ್ರಾಮಾಣಿಕ ಪರಿಸರ, ಕನ್ನಡ ಪ್ರೇಮ, ರೈತಪರ, ಮಾನವತಾವಾದಿ ಅಭ್ಯರ್ಥಿಗಳನ್ನು ಗುರುತಿಸಿ ಮತ ನೀಡುವುದಾಗಿ ತಿಳಿಸಿದರು.
ಚುನಾವಣೆ ಕ್ರಮಗಳೆಂದು ಮುಖ್ಯ ಚುನಾವಣಾಧಿಕಾರಿಗಳೇ ಹೇಳುತ್ತಾರೆ. ಆದರೆ ಅದನ್ನು ಸಮಾನವಾಗಿ ಪಾಲಿಸುವುದಿಲ್ಲ. ದೊಡ್ಡ ಪಕ್ಷಗಳಿಗೆ ಅದರಲ್ಲೂ ಆಡಳಿತ ಪಕ್ಷದ ಅಭ್ಯರ್ಥಿಗಳಿಗೆ ಹಲವಾರು ರಿಯಾಯಿತಿಗಳನ್ನು ಕೊಡುತ್ತಾರೆ. ಚಿಕ್ಕ ಚಿಕ್ಕ ಪಕ್ಷದ ಅಭ್ಯರ್ಥಿಗಳಿಗೆ ಯಾವುದು ರಿಯಾಯಿತಿ ನೀಡುವುದಿಲ್ಲ ಹಾಗೂ ಸ್ವತಂತ್ರ ಅಭ್ಯರ್ಥಿಗಳಿಗೆ ಪ್ರಚಾರ ಮಾಡುವುದಕ್ಕೆ, ರ್ಯಾಲಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಎಲ್ಲಾ ಪಕ್ಷಗಳನ್ನು ಸಮಾಮವಾಗಿ ಕಾಣುವಂತೆ ಮನವಿ ಮಾಡಿದರು.