ನವದೆಹಲಿ,ಏ.23-ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ತೆರಿಗೆ ಮುಕ್ತ(ಡ್ಯೂಟಿ ಫ್ರೀ) ಅಂಗಡಿಗಳಲ್ಲಿ ಸರಕುಗಳನ್ನು ಖರೀದಿಸುವ ಪ್ರಯಾಣಿಕರು ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ ) ಪಾವತಿಸುವುದು ಅನಿವಾರ್ಯವಾಗಿದೆ.
ಹೊಸ ಅಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಥ ಮಾರಾಟ ಮಳಿಗೆಗಳು, ಸುಂಕಗಳಿಂದ ಮುಕ್ತವಾಗಿಲ್ಲ ಎಂಬುದನ್ನು ಏರ್‍ಪೆÇೀರ್ಟ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿನ ಡ್ಯೂಟಿ ಫ್ರೀ ಔಟ್‍ಲೆಟ್‍ಗಳಲ್ಲಿ ವಸ್ತುಗಳನ್ನು ಖರೀದಿಸುವ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ಹೊಸ ವ್ಯವಸ್ಥೆಯಡಿ ಜಿಎಸ್‍ಟಿ ತೆರಿಗೆಯನ್ನು ಪಾವತಿಸಬೇಕಿದೆ.
ಜಿಟಿಎಸ್ ಜಾರಿಗೆ ಬರುವುದಕ್ಕೂ ಮುನ್ನ ಅಸ್ತಿತ್ವದಲ್ಲಿ ಅಬಕಾರಿ ಮತ್ತು ಸೇವೆ ತೆರಿಗೆ ಅನ್ವಯ ವಿಮಾನ ನಿಲ್ದಾಣದ ಡ್ಯೂಟಿ ಫ್ರೀ ಶಾಪ್‍ಗಳನ್ನು ಕೇಂದ್ರೀಯ ಮಾರಾಟ ತೆರಿಗೆ ಮತ್ತು ಮೌಲ್ಯ ವರ್ಧಿತ ತೆರಿಗೆ ಇವುಗಳಿಂದ ವಿನಾಯ್ತಿ ನೀಡಲಾಗಿತ್ತು.
ಆದರೆ ಜಿಎಸ್‍ಟಿ ಪದ್ಧತಿಯಲ್ಲಿ ಕೆಲವು ನೀತಿ ನಿಯಮಗಳು ಮಾರ್ಪಾಟ್ಟಾಗಿರುವುದರಿಂದ ಹೊಸ ತೆರಿಗೆ ಅನ್ವಯವಾಗುತ್ತದೆ.