
ಮೈಸೂರು:ಏ-23: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ, ನನ್ನನ್ನೂ ಗೆಲ್ಲಿಸಿ ನಾನೇನು ಸಿಎಂ ಆಗಬಾರದು ಅಂತ ಯಾರು ಹೇಳಿಲ್ವಲ್ಲಾ ಎಂದು ಪ್ರಶ್ನಿಸುವ ಮೂಲಕ ಸಿಎಂ ಆಗುವ ಇಂಗಿತವನ್ನು ಡಿ.ಕೆ.ಶಿವಕುಮಾರ್ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಮುಂದೆಯೇ ತಮ್ಮ ಇಂಗಿತವನ್ನು ಹೊರಹಾಕಿದ್ದಾರೆ.
ಈ ಬಾರಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಮುಖ್ಯಮಂತ್ರಿ ಮಾಡಿ, ಮುಂದೆ ನನಗೆ ಆಶಿರ್ವಾದ ಮಾಡಿ, ಈ ಸಲ ಸಿದ್ದರಾಮಯ್ಯನವರದು ಮುಗಿದ ಮೇಲೆ ನನ್ನನ್ನು ಸಿಎಂ ಮಾಡಿ, ಯಾಕೆ ನಾವೇನು ಸಿಎಂ ಆಗಬಾರದೆ ಎಂದು ಕಾರ್ಯಕರ್ತರನ್ನ ಪ್ರಶ್ನಿಸಿದರು. ಈ ಮೂಲಕ ಮುಂದಿನ ಬಾರಿ ತಾವೂ ಸಿಎಂ ಸ್ಪರ್ಧಿ ಎಂಬುದನ್ನು ಡಿಕೆಶಿ ತಿಳಿಸಿದ್ದಾರೆ.
Assembly election,D K Shivakumar,CM Siddaramaiah