ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ಬೇಲೂರು ನ್ಯಾಯಾಲಯಕ್ಕೆ ಒಪ್ಪಿಸಿರುವ ಘಟನೆ :

ಬೇಲೂರು, ಏ.22- ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ಬೇಲೂರು ನ್ಯಾಯಾಲಯಕ್ಕೆ ಒಪ್ಪಿಸಿರುವ ಘಟನೆ ಹಳೇಬೀಡು ಪೆÇೀಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಚಾಲಕ ದೇವರಾಜ್ ಮತ್ತು ದಫೇದಾರ್ ಕುಮಾರ್ ಬಂಧಿತ ಆರೋಪಿಗಳು.
ಬೇಲೂರು ತಹಶಿಲ್ದಾರ್ ಉಮೇಶ್ ಅವರು ಹಗರೆಯ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ರಾತ್ರಿ 10.45 ರ ಸಮಯದಲ್ಲಿ ಬೇಲೂರಿನಿಂದ ಹಾಸನದ ಕಡೆಗೆ ಮರಳು ತುಂಬಿದ ಕೆಎ 42.ಎ.1389 ರ ಟಿಪ್ಪರ್ ಬಂದಿದ್ದು ಅದನ್ನು ನಿಲ್ಲಿಸಲು ಹೋದಾಗ ಚಾಲಕ ದೇವರಾಜುವಿಗೆ ಪಕ್ಕದಲ್ಲಿದ ದಫೇದಾರ್ ಕುಮಾರ್ ಅವರು ನಿಲ್ಲಿಸದೆ ವಾಹನ ಚಲಿಸುವಂತೆ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಹಸೀಲ್ದಾರ್ ಉಮೇಶ್, ರಾಜಸ್ವ ನಿರೀಕ್ಷಕ ಉದೀತ್‍ಹಾಗೂ ಇತರರು ವಾಹನವನ್ನು ಬೆನಟ್ಟಿ ನಿಲ್ಲಿಸಿದ್ದಾಗ ಚಾಲಕ ದೇವರಾಜು ಪರಾರಿಯಾಗಲು ಯತ್ನಿಸಿದ್ದಾನೆ ಆದರೆ ದಪ್ಪೆದಾರ್ ಕುಮಾರ್ ಹಾಗೂ ಚಾಲಕ ದೇವರಾಜುವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮರಳು ದಂಧೆಯನ್ನು ತಡೆಯಬೇಕಿರುವ ಪೆÇೀಲೀಸರೇ ಸ್ವತಃ ಮರಳು ಲಾರಿಯಲ್ಲಿ ಕುಳಿತು ಸಾಗಾಣಿಕೆಗೆ ಸಹಕಾರಿಸುತ್ತಾರೆ ಎಂದರೆ ಮರಳು ದಂಧೆಕೋರರಿಗೆ ಕುಮ್ಮಕ್ಕು ನೀಡಿದ ರೀತಿ ಅಲ್ಲವೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರು, ಏ.22- ಒಎಂ ರಸ್ತೆಯಲ್ಲಿನ ಚುನಾವಣಾ ಚೆಕ್‍ಪೆÇೀಸ್ಟ್‍ನಲ್ಲಿ ವಾಹನ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ 2.19 ಕೋಟಿ ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಚೆಕ್‍ಪೆÇೀಸ್ಟ್‍ನಲ್ಲಿ ಚುನಾವಣಾಧಿಕಾರಿಗಳು ಹಾಗೂ ಪೆÇಲೀಸರು ತಪಾಸಣೆ ಮಾಡಿದಾಗ ವಾಹನದಲ್ಲಿ 2.19 ಕೋಟಿ ಹಣ ಪತ್ತೆಯಾಗಿದೆ. ಇದಕ್ಕೆ ನಿಖರವಾದ ದಾಖಲೆಯನ್ನು ಒದಗಿಸದ ಕಾರಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಎಟಿಎಂಗಳಿಗೆ ತುಂಬಲು ಈ ಹಣವನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಹಲಸೂರು ಠಾಣೆ ಪೆÇಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ