ಮಂಡ್ಯ,ಏ.22- ಮಾಜಿ ಸಚಿವ, ನಟ ಅಂಬರೀಶ್ ಅವರ ಆಪ್ತ ಅಮರಾವತಿ ಚಂದ್ರಶೇಖರ್ ಅವರನ್ನು ಮಂಡ್ಯ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಅಂಬರೀಶ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಿ ಫಾರಂ ನೀಡಿದ್ದರೂ ಸ್ಪರ್ಧೆಯಿಂದ ಹಿಂದೆ ಸರಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮುನಿಸಿಕೊಂಡಿದ್ದ ಅಂಬರೀಶ್ ಅವರನ್ನು ಸಮಾಧಾನ ಪಡಿಸಲು ಕಾಂಗ್ರೆಸ್ ಈ ತಂತ್ರಗಾರಿಕೆ ರೂಪಿಸಿದೆ ಎನ್ನಲಾಗಿದೆ.
ಈ ಕುರಿತು ಅಂಬರೀಶ್ ಮತ್ತು ಸಿಎಂ ಸಿದ್ದರಾಮಯ್ಯ ಅವರುಗಳು ಇಂದು ಮಹತ್ವದ ಮಾತುಕತೆ ನಡೆಸಲಿದ್ದು ಅಂಬರೀಶ್ ಅವರ ಸೂಚನೆ ಮೇರೆಗೆ ಅವರ ಆಪ್ತ ಅಮರಾವತಿ ಚಂದ್ರಶೇಖರ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಿ ಜಿಲ್ಲೆಯಲ್ಲಿ ಪ್ರಚಾರಕ್ಕೆ ಕರೆ ತರುವ ಬಗ್ಗೆ ಚಿಂತಿಸಲಾಗಿದೆ.
ಅಂಬರೀಶ್ ಅವರೇ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಕಾಂಗ್ರೆಸ್ ನಿರ್ಧರಿಸಿ ಅವರಿಗೆ ಬಿ ಫಾರಂ ಕೂಡ ನೀಡಲಾಗಿತ್ತು. ಆದರೆ ಸಚಿವ ಸ್ಥಾನದಿಂದ ಏಕಾಏಕಿ ಕೆಳಗಿಳಿಸಿದ್ದಕ್ಕೆ ಕೋಪಗೊಂಡಿದ್ದು, ನಾನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿ ಬಿಗ್ ಶಾಕ್ ನೀಡಿದ್ದರು. ಅಂಬರೀಶ್ ಅವರನ್ನು ಮನವೊಲಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದವು.
ಸಂಧಾನಕ್ಕೆ ಬಂದವರಿಗೆ ಮನೆಯಲ್ಲೂ ಇರದೆ, ಪೆÇೀನಿಗೂ ಸಿಗದೆ ಕಾಂಗ್ರೆಸ್ಗೆ ತಲೆನೋವಾಗಿತ್ತು. ಇದೀಗ ಶತಾಯಗತಾಯ ಅಂಬಿರೀಶ್ ಅವರನ್ನು ಮನವೊಲಿಸಿ ಕಾಂಗ್ರೆಸ್ ಪ್ರಚಾರಕ್ಕೆ ಕರೆತರುವ ಉದ್ದೇಶದಿಂದ ಅವರ ಆಪ್ತ ಅಮರಾವತಿ ಚಂದ್ರಶೇಖರ್ ಅವರಿಗೆ ಬಿ ಫಾರಂ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.