ನವದೆಹಲಿ, ಏ.22-ಅತ್ಯಾಚಾರದಂಥ ಅಪರಾಧ ಕೃತ್ಯಗಳು ದುರದೃಷ್ಟಕರ. ಕೆಲವೊಮ್ಮೆ ಅವುಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಗಂಗ್ವಾರ್ ವಿಷಾದಿಸಿದ್ದಾರೆ.
ಕತುವಾ, ಉನ್ನಾವೋ ಮತ್ತು ಇತರ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕಠಿಣ ನಿರ್ಧಾರವನ್ನು ಸ್ವಾಗತಿಸಿದರು.
ಅತ್ಯಾಚಾರ, ಕೊಲೆ ಮೊದಲಾದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಇವುಗಳ ಬಗ್ಗೆ ತ್ವರಿತ ತನಿಖೆಗಳೂ ನಡೆಯುತ್ತಿವೆ.
ಭಾರತದಂಥ ದೊಡ್ಡ ದೇಶದಲ್ಲಿ ಅತ್ಯಾಚಾರಗಳು ಅಲ್ಲಲ್ಲಿ ನಡೆಯುತ್ತವೆ. ಇಂಥ ಘಟನೆಗಳು ಭಾರೀ ಪ್ರಚಾರ ಪಡೆದುಕೊಳ್ಳುತ್ತವೆ ಎಂಬ ವಿವಾದಿತ ಹೇಳಿಕೆಯನ್ನೂ ಅವರು ನೀಡಿ ಈಗ ವಿವಾದಕ್ಕೆ ಸಿಲುಕಿದ್ದಾರೆ.