
ಬೇಲೂರು, ಏ.22- ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೀರ್ತನಾರುದ್ರೇಶ ಗೌಡ ನಾಳೆ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಎಸ್.ಪೂರ್ಣೇಶ್ ಹೇಳಿದರು
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೀ ಚನ್ನಕೇಶವ ದೇವಸ್ಥಾನದಿಂದ ಬೆಳಿಗ್ಗೆ 11.30ಕ್ಕೆ ಮೆರವಣಿಗೆಯಲ್ಲಿ ಹೊರಟು 1.15ಕ್ಕೆ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುತ್ತಾರೆ ಎಂದರು
ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಪ್ರಬಲ ಟೀಕೆಟ್ ಆಕಾಂಕ್ಷಿಯಾಗಿದ್ದ ಬಿ.ಶಿವರಾಂರವರು ಕೀರ್ತನಾ ರುದ್ರೇಶಗೌಡ ಅವರಿಗೆ ಬೆಂಬಲ ನೀಡುವ ಭರವಸೆ ನೀಡಿದ್ದು, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾಗವಹಿಸುವರು. ನಾನು ಸಹ ಸಧ್ಯದಲ್ಲೆ ಅವರನ್ನು ಭೇಟಿ ಮಾಡಲಿದ್ದೇನೆ ಎಂದರಲ್ಲದೆ ಬಿ.ಶಿವರಾಂರವರ ಜೊತೆ ಗುರುತಿಸಿಕೊಂಡಿದ್ದ ಹಲವಾರು ನಾಯಕರನ್ನು ಫೆÇೀನ್ ಮೂಲಕ ಸಂಪರ್ಕಿಸಿದ್ದು ಇನ್ನು ಹಲವರನ್ನು ಭೇಟಿಯಾಗಿ ಸಹಕಾರ ಕೇಳಲಿದ್ದೇನೆ. ಕಾಂಗ್ರೆಸ್ ನ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ಕಾಂಗ್ರೆಸ್ ಮುಖಂಡ ಮಲ್ಲೇಶಗೌಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಹೆಚ್.ಕೆ.ಜವರೇಗೌಡ, ಹೆಚ್.ಎಂ.ವಿಶ್ವನಾಥ್, ಶಿವರುದ್ರಪ್ಪ. ಹಾಗೂ ಬಿ.ಶಿವರಾಂ ಆಕಾಂಕ್ಷಿಗಳಾಗಿದ್ದರು. ಆದರೆ ಹೈಕಮಾಂಡ್ ಅಂತಿಮವಾಗಿ ನಮ್ಮ ಕುಟುಂಬದ ಕೀರ್ತನಾ ರುದ್ರೇಶಗೌಡ ಅವರಿಗೆ ಟೀಕೆಟ್ ನಿಡಿದ್ದರಿಂದ ಟಿಕೇಟ್ ಆಕಾಂಕ್ಷಿಗಳಗಿದ್ದ ಎಲ್ಲಾ ನಾಯಕರು ನಮ್ಮಗೆ ಸಹಕಾರ ನಿಡುವ ಭರವಸೆ ನಿಡಿದ್ದಾರೆ ಎಂದರು ನಿಮ್ಮ ಕುಟುಂಬದ ವೈ.ಎನ್. ಕೃಷ್ಣೇಗೌಡ ಸಹ ಟೀಕೆಟ್ ಆಕಾಂಕ್ಷಿಯಾಗಿದ್ದರು ಎಂಬ ಪತ್ರಕರ್ತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಕುಟುಂಬವು ತುಂಬಿದ ಕುಟುಂಬವಾಗಿದ್ದು ಏನೇ ಇದ್ದರು ನಾವೆಲ್ಲ ಒಟ್ಟಿಗೆ ಕುಳಿತು ನಿರ್ಧಾರ ತೆಗೆದುಕೊಳ್ಳುತ್ತೇವೆ ಹಾಗಾಗಿ ನಾವೆಲ್ಲ ಒಗ್ಗಟಿನಿಂದ ಕೆಲಸ ಮಾಡುತ್ತಿದ್ದೆವೆ. ವೈ.ಎನ್.ರುದ್ರೇಶಗೌಡರು ಮೊದಲ ಭಾರಿ ಶಾಸಕರಾದಗ ಪಡೆದ ಮತಕ್ಕಿಂತಲೂ ಹೆಚ್ಚಿನ ಮತವನ್ನು ಈ ಭಾರಿ ಪಡೆಯಲಿದ್ದೇವೆ ಎಂದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸತ್ಯನಾರಾಯಣ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಲಿಂ, ನೆಟ್ಟೆಕೆರೆ ಮಂಜುನಾಥ್ ಇದ್ದರು.