ಬೆಂಗಳೂರು, ಏ.22- ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನಿಂದಲೇ ಚುನಾವಣೆ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದು, ವಿಶೇಷವಾಗಿ ನಿರ್ಮಿಸಲಾದ ಹವಾ ನಿಯಂತ್ರಿತ ಟೆಂಪೆÇೀ ಟ್ರಾವೆಲರ್ನಲ್ಲಿ
ತಮ್ಮ ಮನೆಯಿಂದ ಎಚ್ಎಎಲ್ ವಿಮಾನನಿಲ್ದಾಣದವರೆಗೆ ತೆರಳಿ ನಂತರ ಅಲ್ಲಿಂದ ವಿಮಾನದಲ್ಲಿ ಮೈಸೂರಿಗೆ ಪ್ರಯಾಣಿಸಿದರು.
ಈವರೆಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಟೆಂಪೆÇೀ ಟ್ರಾವೆಲರ್ ವಾಹನ ಹತ್ತಿದ್ದು, ತಮ್ಮೊಂದಿಗೆ ಸಚಿವರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಪ್ರಮುಖರನ್ನು ಮತ್ತು ಶಾಸಕರನ್ನು ಕರೆದೊಯ್ದಿದ್ದಾರೆ.
ಪ್ರಚಾರ ಕಾರ್ಯಕ್ಕಾಗಿ ವಿಶೇಷವಾಗಿ ನಿರ್ಮಿಸಿರುವ ಟೆಂಪೆÇೀ ಟ್ರಾವೆಲರ್ನಲ್ಲಿಂದು ಟೆಸ್ಟ್ಡ್ರೈವ್ ಹೊರಟ ಸಿಎಂ, ತಮ್ಮ ನಿವಾಸದಿಂದ ಎಚ್ಎಎಲ್ ವಿಮಾನ ನಿಲ್ದಾಣದವರೆಗೂ ಸಾಗಿದರು.
ಪಕ್ಷದ ವತಿಯಿಂದ ನಿರ್ಮಿಸಲಾಗಿರುವ ಈ ವಿಶೇಷ ವಾಹನದಲ್ಲಿ ನಾಲ್ಕು ಸೀಟ್ಗಳಿದ್ದು, ಹೈಡ್ರಾಲಿಕ್ ಸ್ಟೇಜ್ ಒಳಗೊಂಡಿದೆ. ಪ್ರಚಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿಶ್ರಾಂತಿ ಪಡೆಯಲು ಒಂದು ಮಂಚದ ವ್ಯವಸ್ಥೆಯೂ ಮಾಡಲಾಗಿದೆ.
27ರ ನಂತರ ನಡೆಯಲಿರುವ ಪ್ರಚಾರದಲ್ಲಿ ಈ ವಾಹನದಲ್ಲೇ ರಾಜ್ಯಾದ್ಯಂತ ಮುಖ್ಯಮಂತ್ರಿಗಳು ಪ್ರವಾಸ ಕೈಗೊಳ್ಳಲಿದ್ದಾರೆ. ಸಂಪೂರ್ಣ ಹವಾನಿಯಂತ್ರಿತವಾಗಿರುವ ಈ ವಾಹನ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
ಭೇಟಿಗೆ ಸಿಗದ ಅಂಬರೀಶ್:
ಕಾಂಗ್ರೆಸ್ ಬಿ ಫಾರಂನ್ನು ಮನೆ ಬಾಗಿಲಿಗೆ ತಲುಪಿಸಿದರೂ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಮುನಿಸಿಕೊಂಡಿರುವ ಅಂಬರೀಶ್ ಅವರನ್ನು ಭೇಟಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸಿದರಾದರೂ ಅವರು ಕೈಗೆ ಸಿಗದೆ ಅಂಬರೀಶ್ ಮೈಸೂರಿನತ್ತ ಪ್ರಯಾಣಿಸಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ಬೆಂಗಳೂರಿನಿಂದ ಹೊರಟ ಸಿದ್ದರಾಮಯ್ಯ ಅವರು ಅಂಬರೀಶ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ವೇಳೆಗೆ ಅಂಬರೀಶ್ ಮನೆಯಲ್ಲಿಲ್ಲ ಎಂಬ ಸಂದೇಶ ಬಂದಿದ್ದರಿಂದ ಸಿದ್ದರಾಮಯ್ಯ ಟೆಂಪೆÇೀ ಟ್ರಾವೆಲರ್ನಲ್ಲಿ ವಿಮಾನನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮೈಸೂರಿನತ್ತ ಪ್ರಯಾಣಿಸಿದರು.
ಮೈಸೂರಿನಿಂದ ಸ್ವಕ್ಷೇತ್ರ ಚಾಮುಂಡೇಶ್ವರಿಗೆ ಬಂದು ರೋಡ್ಶೋ ನಡೆಸಲಿದ್ದಾರೆ ಎಂದು ಹೇಳಲಾಗಿದೆ.