ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು ಕೊನೆಗೊಳಿಸುವುದಾಗಿ ಘೋಷಿಸಿದ ಉತ್ತರ ಕೊರಿಯಾ

Varta Mitra News

ಸೋಲ್‌:ಏ-21: ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು ಕೊನೆಗೊಳಿಸಿರುವುದಾಗಿ ಉತ್ತರ ಕೊರಿಯಾ ಸರ್ವಾಧಿಕಾರಿ ನಾಯಕ ಕಿಮ್ ಜಾನ್ ಉನ್ ಪ್ರಕಟಿಸಿದೆ.

ಅಣ್ವಸ್ತ್ರಗಳ ಪ್ರಮಾಣ ತಗ್ಗಿಸುವ ಸಂಬಂಧ ಪ್ಯೋಂಗ್ಯಾಂಗ್‌, ಸೋಲ್‌ ಹಾಗೂ ವಾಷಿಂಗ್ಟನ್‌ ನಡುವೆ ನಡೆಯಲಿರುವ ಮಾತುಕತೆಗೂ ಮುನ್ನವೇ ಉತ್ತರ ಕೊರಿಯಾ ಈ ನಿರ್ಧಾರ ಪ್ರಕಟಿಸಿದೆ. ಪರಮಾಣು ಪರೀಕ್ಷಾ ವಲಯಗಳನ್ನೂ ಮುಚ್ಚುವ ಯೋಚನೆಯನ್ನೂ ವ್ಯಕ್ತಪಡಿಸಿದೆ.

ಅಮೆರಿಕ ಸೇರಿ ಹಲವು ರಾಷ್ಟ್ರಗಳ ವಿರೋಧ ಮತ್ತು ಎಚ್ಚರಿಕೆ ನಡುವೆಯೂ ಸಾಲಾಗಿ ಪರಮಾಣು ಕ್ಷಿಪಣಿ ಹಾಗೂ ಮೂರು ಖಂಡಾಂತರ ಕ್ಷಿಪಣಿ ಪರೀಕ್ಷೆಗಳನ್ನು ಉತ್ತರ ಕೊರಿಯಾ ನಡೆಸಿತ್ತು. ನವೆಂಬರ್‌ನಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಂಗ್‌ ಉನ್‌ ಪರಮಾಣು ಶಕ್ತಿ ಪರೀಕ್ಷೆ ಸಂಪೂರ್ಣ ಎಂದು ಘೋಷಿಸಿದ್ದರು.

ಏ.27ರಂದು ಕಿಮ್‌‌ ಜಾಂಗ್ ಉನ್‌‌ ಶೃಂಗಸಭೆಯನ್ನು ಕರೆದಿದ್ದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾಗಿಯಾಗಲಿದ್ದಾರೆ.

ಇದೇ ವೇಳೆ ಉತ್ತರ ಕೊರಿಯಾದ ನಿರ್ಧಾರವನ್ನು ಟ್ರಂಪ್‌‌ ಸ್ವಾಗತಿಸಿದ್ದಾರೆ. ಟ್ವಿಟ್ಟರ್‌ ಮೂಲಕ ಸಂಸತ ವ್ಯಕ್ತಪಡಿಸಿರುವ ಟ್ರಂಪ್‌, ಇದೊಂದು ಗುಡ್‌ ನ್ಯೂಸ್‌ ಎಂದಿದ್ದಾರೆ. ಶೃಂಗಸಭೆಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಪರಮಾಣು ಹಾಗೂ ಕ್ಷಿಪಣಿ ಪರೀಕ್ಷೆಯನ್ನು ನಿಲ್ಲಿಸಿರುವುದು ದೊಡ್ಡ ಪ್ರಗತಿ. ಉತ್ತರ ಕೊರಿಯಾ ಹಾಗೂ ವಿಶ್ವಕ್ಕೆ ಇದೊಂದು ಒಳ್ಳೆಯ ಸುದ್ದಿ ಎಂದು ಬಣ್ಣಿಸಿದ್ದಾರೆ.

ಆದರೆ ದಕ್ಷಿಣ ಕೊರಿಯಾ ಹಾಗೂ ಅಮೆರಿಕಾ ಅಧ್ಯಕ್ಷರ ಶೃಂಗಸಭೆ ಬಗ್ಗೆ ಜಪಾನ್‌‌ ಅಸಮಾಧಾನ ವ್ಯಕ್ತಪಡಿಸಿದೆ. ಕಿಮ್‌ ಅವರ ನಿರ್ಧಾರದ ಬಗ್ಗೆ ಜಪಾನ್‌ ಅಸಮಾಧಾನ ವ್ಯಕ್ತಪಡಿಸಿದೆ.

ದೇಶದ ಆರ್ಥಿಕತೆವೃದ್ಧಿಸಲು ಮುಂದಾಗಿರುವ ಉತ್ತರ ಕೊರಿಯಾ ತನ್ನ ಸಮೀಪ ರಾಷ್ಟ್ರಗಳೊಂದಿಗೆ ಬಾಂಧವ್ಯ ಗಟ್ಟಿಗೊಳಿಸುವ ಪ್ರಯತ್ನ ನಡೆಸಿದೆ. ಕೊರಿಯಾ ಪೆನಿನ್ಸುಲಾದಲ್ಲಿ ಶಾಂತಿ ಕಾಪಾಡಲು ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಮಾತುಕತೆಗೆ ಮುಂದಾಗಿದೆ.

North Korea announces, it would stop nuclear tests,launches of intercontinental ballistic missiles

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ