ರಾಮನಗರಕ್ಕೆ ಆಗಮಿಸಿದ ಕುಮಾರಸ್ವಾಮಿ
ರಾಮನಗರದ ಚಾಮುಂಡೇಶ್ವರಿ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿದ ಎಚ್ಡಿಕೆ
ನಂತರ ದರ್ಗಾ ಮತ್ತು ಚರ್ಚ್ ಗಳಿಗೆ ಭೇಟಿ ನೀಡಿ ಪ್ರಾರ್ಥನೆ
ಪಕ್ಷದ ಕಾರ್ಯಕರ್ತರ ಒತ್ತಾಯದ ಮೇಲೆ ರಾಮನಗರ ವಿಧಾನಸಭಾ ಕ್ಷೇತ್ರದ ಜೊತೆ ಚನ್ನಪಟ್ಟಣ ದಲ್ಲಿ ಕೂಡಾ ನಾಮಪತ್ರ ಸಲ್ಲಿಸುತ್ತಿದ್ದೇನೆ
ರಾಜ್ಯದ ಜನರ ನಾಡಿಮಿಡಿತ ದ ಪ್ರಕಾರ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ
ಇಪ್ಪತ್ತೈದು ಸ್ಥಾನ ಗೆಲ್ಲಲೂ ಆಗದವರು ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಾರೆ ಅಂತಾ ಲಘುವಾಗಿ ಮಾತನಾಡಿದ್ದಾರೆ
ನಾನು ಎಲ್ಲೂ ಮುಖ್ಯಮಂತ್ರಿ ಆಗುತ್ತೇನೆ ಅಂತಾ ಹೇಳಿಲ್ಲ
ನಾಡಿನ ಸೇವೆ ಮಾಡುವ ಅವಕಾಶ ಜನ ನೀಡುತ್ತಾರೆ ಅನ್ನೊ ನಂಬಿಕೆ ಇದೆ
ನನಗೆ ಮುಖ್ಯಮಂತ್ರಿ ಗಳ ಸರ್ಟಿಫಿಕೇಟ್ ಬೇಕಿಲ್ಲ
ಯಾರು ನಮ್ಮನ್ನು ಆಳಬೇಕು ಅಂತಾ ನಾಡಿನ ಜನ ತೀರ್ಮಾನ ಮಾಡುತ್ತಾರೆ
ಡಿಕೆ ಸುರೇಶ್ ಹೇಳಿಕೆ ಟಾಂಗ್ ಕೊಟ್ಟ ಹೆಚ್ ಡಿಕೆ
ಚನ್ನಪಟ್ಟಣ ಕ್ಷೇತ್ರದ ಚುನಾವಣೆಯಲ್ಲಿ ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯ ಬೇಕೆಂದು ಕಾರ್ಯಕರ್ತರಿಗೆ ಹೇಳಿದ ಡಿಕೆ ಸುರೇಶ್
ಅವರು ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಬೇಕಾದರೂ ಹೊಡೆಯಲ್ಲಿ ಇಪ್ಪತ್ತು ಬೇಕಾದರೂ ಹೊಡೆಯಲಿ ಎಂದ ಹೆಚ್ ಡಿಕೆ
ಮಾರ್ಮಿಕವಾಗಿ ಡಿಕೆ ಸುರೇಶ್ ಗೆ ಉತ್ತರ ನೀಡಿದ ಕುಮಾರಸ್ವಾಮಿ
ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಕುಮಾರಸ್ವಾಮಿ ಹೇಳಿಕೆ
ಪೊಲೀಸರನ್ನ ಬಳಸಿಕೊಂಡು ಕೇಸ್ ಹಾಕುಸ್ತೀನಿ ಅಂತ ಬೇರೆಯವರು ಬ್ಲ್ಯಾಕ್ ಮೇಲ್ ಮಾಡೋ ಜಾಯಮಾನ ನನ್ನದಲ್ಲ.
ಎರಡೂ ಕ್ಷೇತ್ರಗಳಲ್ಲೂ ನಾನು ಚುನಾವಣೆಗೆ ಸ್ಪರ್ಧೆ ಮಾಡಿರುವುದರ ಉದ್ದೇಶ, ರಾಮನಗರ ಚನ್ನಪಟ್ಟಣ ಎರಡೂ ಕ್ಷೇತ್ರಗಳನ್ನ ಅವಳಿ ನಗರವನ್ನಾಗಿಸಿ ಕೈಗಾರಿಕೆಗಳನ್ನ ತಂದು ಅಭಿವೃದ್ಧಿ ಮಾಡೋದು ನನ್ನ ಉದ್ದೇಶ.
ನಾನು ಯಾರಿಗೂ ತಲೆಬಾಗೊಲ್ಲ. ನನ್ನನ್ನ ಬೆಳೆಸಿದ ಜನತೆಗೆ ತಲೆಬಾಗ್ತೀನಿ ಅಷ್ಟೆ.
ರಾಮನಗರದ ಜನ ನನ್ನನ್ನ ಬೆಳೆಸಿ ಅತ್ಯುನ್ನತ ಸ್ಥಾನ ಕಲ್ಪಿಸಿದ್ದೀರಿ. ಈ ಚುನಾವಣೆಯಲ್ಲೂ ನನಗೆ ನೀವುಗಳು ಹೆಚ್ಚಿನ ರೀತಿಯಲ್ಲಿ ಆಶೀರ್ವಾದ ಮಾಡಿ.
ಈ ಭಾರಿ ನಮ್ಮ ಸರ್ಕಾರ ರಚನೆಯಾಗೋದು ಖಚಿತ.
ನಮ್ಮ ಸರ್ಕಾರ ರಚನೆಯಾದ ತಕ್ಷಣವೇ 24 ಗಂಟೆ ವಿದ್ಯುತ್ ಪೂರೈಕೆ ಮಾಡ್ತೀವಿ ರಾಮನಗರದಲ್ಲಿ ಹೆಚ್ಡಿಕೆ ಹೇಳಿಕೆ.