ಕಾಂಗ್ರೆಸ್ ಶಾಸಕರಾದ ಜಿ.ಎಸ್.ಶ್ರೀನಿವಾಸ್ ಹಾಗೂ ಎ.ಎಸ್.ಪಾಟೀಲ್ ರಾಜೀನಾಮೆ ಅಂಗೀಕಾರ

 

ಬೆಂಗಳೂರು, ಏ.21-ಕಾಂಗ್ರೆಸ್ ಶಾಸಕರಾದ ಜಿ.ಎಸ್.ಶ್ರೀನಿವಾಸ್ ಹಾಗೂ ಎ.ಎಸ್.ಪಾಟೀಲ್(ನಡಹಳ್ಳಿ) ಅವರು ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅಂಗೀಕರಿಸಿದ್ದಾರೆ.

ಈ ಇಬ್ಬರೂ ಶಾಸಕರು ನೀಡಿದ್ದ ರಾಜೀನಾಮೆಯನ್ನು ಸಭಾಧ್ಯಕ್ಷರು ಅಂಗೀಕರಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ದೇವರ ಹಿಪ್ಪರಗಿ ಕ್ಷೇತ್ರದ ಶಾಸಕರಾಗಿದ್ದ ಎ.ಎಸ್.ಪಾಟೀಲ್ ಅವರನ್ನು ಕಾಂಗ್ರೆಸ್ ಪಕ್ಷ ಉಚ್ಚಾಟಿಸಿತ್ತು. ನಂತರ ಜೆಡಿಎಸ್ ಸೇರಿದ್ದ ಪಾಟೀಲ್ ಈಗ ಬಿಜೆಪಿ ಸೇರಿದ್ದಾರೆ.
ಶ್ರೀನಿವಾಸ್ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ