ಅಂತೂ-ಇಂತೂ ಕಾಂಗ್ರೆಸ್ ಅಭ್ಯರ್ಥಿಗಳ ಗೊಂದಲ ಮುಂದುವರೆದಿದೆ. ಬಾದಾಮಿ ಹೊರತುಪಡಿಸಿ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳು ಅಂತಿಮ

ಬೆಂಗಳೂರು, ಏ.21-ಅಂತೂ-ಇಂತೂ ಕಾಂಗ್ರೆಸ್ ಅಭ್ಯರ್ಥಿಗಳ ಗೊಂದಲ ಮುಂದುವರೆದಿದೆ. ಬಾದಾಮಿ ಹೊರತುಪಡಿಸಿ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ.
ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಆ ಕ್ಷೇತ್ರಕ್ಕೆ ಇನ್ನು ಅಭ್ಯರ್ಥಿ ಅಖೈರುಗೊಂಡಿಲ್ಲ. ಅದನ್ನು ಹೊರತುಪಡಿಸಿದರೆ ಉಳಿದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಬಹುತೇಕ ಅಂತಿಮಗೊಳಿಸಲಾಗಿದೆ. 218 ಕ್ಷೇತ್ರಗಳ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದ್ದು, ಆರು ಕ್ಷೇತ್ರಗಳಿಗೆ ಹೆಸರು ಪ್ರಕಟಿಸಿರಲಿಲ್ಲ. ಅದರಲ್ಲಿ ಮೇಳುಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕಿಳಿಸದಿರಲು ನಿರ್ಧರಿಸಿದೆ.

ತಿನಗರ ಕ್ಷೇತ್ರಕ್ಕೆ ಹಾಲಿ ಶಾಸಕ ಎನ್.ಎ.ಹ್ಯಾರೀಸ್ ಸ್ಪರ್ಧಿಸುವುದು ಖಚಿತವಾಗಿದೆ. ರಾಯಚೂರು ನಗರ ಕ್ಷೇತ್ರದಿಂದ ಜಾಫರ್ ಶರೀಫ್ ಅವರ ಅಳಿಯ ಸೈಯ್ಯದ್ ಯಾಸೀನ್ ಅವರು ಸ್ಪರ್ಧಿಸಲಿದ್ದಾರೆ. ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಪಕ್ಷ ನಿರ್ಧರಿಸಿದೆ.

ಕಿತ್ತೂರಿನಿಂದ ಬಿ.ಬಿ.ಇನಾಂದಾರ್ ಅವರೇ ಕಣಕ್ಕಿಳಿಯುವುದು ಖಚಿತವಾಗಿದೆ. ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಷಡಕ್ಷರಿ ಹಾಗೂ ನಂಜಾಮರಿ ನಡುವೆ ಪೈಪೆÇೀಟಿ ಏರ್ಪಟ್ಟಿತ್ತು. ಮೊದಲಿಗೆ ನಂಜಾಮರಿ ಅವರ ಹೆಸರು ಘೋಷಿಸಲಾಗಿತ್ತಾದರೂ ಕಡೆಗೆ ಷಡಕ್ಷರಿ ಅವರು ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಗಳೂರು ಕ್ಷೇತ್ರದಲ್ಲಿ ಘೋಷಿತ ಅಭ್ಯರ್ಥಿ ಪುಷ್ಪಾ ಅವರ ಬದಲು ಹಾಲಿ ಶಾಸಕ ಎಚ್.ಪಿ.ರಾಜೇಶ್ ಅವರನ್ನೇ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ನಾಗಠಾಣ ಕ್ಷೇತ್ರದಿಂದ ರಾಜು ಅಲಗೂರು ಅವರು ಸ್ಪರ್ಧಿಸಲಿದ್ದಾರೆ. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಸಚಿವ ಎಂ.ಆರ್.ಸೀತಾರಾಮ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಅವರು ಕಣಕ್ಕಿಳಿಯಲು ಹಿಂದೇಟು ಹಾಕಿದ್ದರಿಂದ ವಕೀಲ ದಿವಾಕರ್ ಅಥವಾ ಶ್ರೀಪಾದರೇಣು ಅವರಿಗೆ ಟಿಕೆಟ್ ನೀಡಲು ಚಿಂತನೆ ನಡೆದಿದೆ.

ಬೆಂಗಳೂರಿನ ಪದ್ಮನಾಭ ನಗರ ಕ್ಷೇತ್ರದಲ್ಲಿ ಗುರ್ರಪ್ಪ ನಾಯ್ಡು ಅವರಿಗೆ ಬಿ-ಫಾರಂ ನೀಡಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಇನ್ನು ಸಿಂಧಗಿ ಕ್ಷೇತ್ರದ ಟಿಕೆಟ್ ಅಂತಿಮಗೊಂಡಿಲ್ಲ. ಶಾಣಪ್ಪ ಸವಣೂರು ಹಾಗೂ ಮಂಜುಳಾ ನಡುವೆ ಪೈಪೆÇೀಟಿ ಏರ್ಪಟ್ಟಿದೆ. ಈ ಸಂಜೆಯೊಳಗೆ ಅಂತಿಮಗೊಳ್ಳಲಿದೆ. ಇನ್ನುಳಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ