![accident](http://kannada.vartamitra.com/wp-content/uploads/2018/03/accident-1-511x381.jpg)
ಚನ್ನಪಟ್ಟಣ, ಏ.21- ದ್ವಿಚಕ್ರವಾಹನಕ್ಕೆ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪೂರ್ವ ಪೆÇಲೀಸ್ ಠಾಣೆ ವ್ಯಾಪ್ತಿಯ ಕುಡಿನೀರುಕಟ್ಟೆ ಬಳಿ ನಡೆದಿದೆ.
ಪೂಜಾ ಕುಣಿತ ಕಲಾವಿದ ಯೋಗಾನಂದ (30) ಮೃತ ದುರ್ಧೈವಿ.ನಾಗವಾರ ಗ್ರಾಮದ ಈತ ಕೆಲಸದ ನಿಮಿತ್ತ ರಾಮನಗರಕ್ಕೆ ತೆರಳಿ ಕೆಲಸ ಮುಗಿಸಿ ಬರುವಾಗ ಈ ಘಟನೆ ಸಂಭವಿಸಿದೆ.
ದ್ವಿಚಕ್ರವಾಹನದಲ್ಲಿ ಬರುವಾಗ ಹಿಂಬದಿಯಿಂದ ಅತಿವೇಗವಾಗಿ ಬಂದ ಸ್ವಿಪ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತ ಯೋಗಾನಂದ ಜೆಡಿಎಸ್ ಯುವ ಮುಖಂಡನಾಗಿದ್ದು ಪೂಜಾ ಕುಣಿತದಲ್ಲಿ ಸಿದ್ದಹಸ್ತನಾಗಿದ್ದ ಈತ ಹೊರ ರಾಜ್ಯಗಳಲ್ಲಿಯೂ ತನ್ನ ಕಲೆ ಪ್ರದರ್ಶಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದರು.
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಪ್ರಕರಣದ ಬಗ್ಗೆ ಪೂರ್ವ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.