
ಲಕ್ನೋ/ರಾಯ್‍ಪುರ, ಏ.20-ಕತುವಾದಲ್ಲಿ ಎಂಟು ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ವ್ಯಾಪಕ ಪ್ರತಿಭಟನೆ ಮತ್ತು ಆಕ್ರೋಶ ಮುಂದುವರಿದಿರುವಾಗಲೇ ಉತ್ತರ ಪ್ರದೇಶ ಮತ್ತು ಛತ್ತೀಸ್‍ಗಢದಲ್ಲಿ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮುಂದುವರಿದ ಹೇಯ ಕೃತ್ಯಗಳಿಂದಾಗಿ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ವಿವಾಹ ಸಮಾರಂಭಗಳಲ್ಲಿ ಭಾಗವಹಿಸಿದ್ದ ಒಂಭತ್ತು ಮತ್ತು ಹತ್ತು ವರ್ಷಗಳ ಮಕ್ಕಳ ಮೇಲೆ ಪ್ರತ್ಯೇಕ ಘಟನೆಗಳಲ್ಲಿ ಈ ಕೃತ್ಯ ನಡೆದಿರುವುದು ದೇಶವನ್ನು ಮತ್ತೊಮ್ಮೆ ಬೆಚ್ಚಿ ಬೀಳಿಸಿದೆ.
ಉತ್ತರ ಪ್ರದೇಶದ ಎಥಾ ಜಿಲ್ಲೆಯ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಒಂಭತ್ತು ವರ್ಷದ ಬಾಲಕಿ ತನ್ನ ಕುಟುಂಬದ ಸದಸ್ಯರೊಂದಿಗೆ ಬಂದಿದ್ದಳು. ವಿವಾಹ ಭೋಜನ ಸಿದ್ದಪಡಿಸುತ್ತಿದ್ದ ತಂಡದಲ್ಲಿದ್ದ ಪಿಂಟು ಎಂಬ ಅಡುಗೆ ಭಟ್ಟನ ಸಹಾಯಕ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಂದಿದ್ದಾನೆ. ನಿನ್ನೆ ರಾತ್ರಿ 9 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.
ಬಾಲಕಿ ನಾಪತ್ತೆಯಾದ ನಂತರ ಹುಡುಕಾಟ ಮುಂದುವರಿಸಿದ ಬಾಲಕಿ ಕುಟುಂಬದವರಿಗೆ ಇಂದು ಮುಂಜಾನೆ 3ರ ಸಮಯದಲ್ಲಿ ಮೃತದೇಹ ಪತ್ತೆಯಾಯಿತು. ಈ ಸಂಬಂಧ ಆರೋಪಿ ಪಿಂಟುನನ್ನು ಪೆÇಲೀಸರು ಬಂಧಿಸಿದ್ದಾರೆ.
ಇದೇ ಜಿಲ್ಲೆಯ ಮತ್ತೊಂದು ಗ್ರಾಮದಲ್ಲಿ ಕಳೆದ ವಾರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ 8 ವರ್ಷ ಬಾಲಕಿಯೊಬ್ಬಳನ್ನು 18 ವರ್ಷದ ಯುವಕನೊಬ್ಬ ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ಉಸಿರುಗಟ್ಟಿಸಿ ಕೊಂದಿದ್ದ. ನಂತರ ಕಂಠಪೂರ್ತಿ ಮದ್ಯ ಸೇವಿಸಿ ಬಾಲಕಿಯ ಶವದ ಪಕ್ಕದಲ್ಲೇ ಮಲಗಿದ್ದ ಆತನನ್ನು ಬಂಧಿಸಲಾಯಿತು.
ಮತ್ತೊಂದು ಭೀಕರ ಘಟನೆ : ಛತ್ತೀಸಗಢದ ಕಬೀರ್‍ಧಾಮ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದ ಮತ್ತೊಂದು ಭೀಕರ ಘಟನೆಯಲ್ಲಿ 25 ವರ್ಷ ಕಾಮುಕನೊಬ್ಬ 10 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡಿ ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ.
ವಧುವಿನ ಕಡೆಯ ಬಾಲಕಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಉತ್ತಮ್ ಸಾಹು ಎಂಬಾತ ಅತ್ಯಾಚಾರ ಎಸಗಿ ನಂತರ ಕಲ್ಲಿನಿಂದ ತಲೆಯನ್ನು ಜಜ್ಜಿ ಕೊಂದು ಏನೂ ಅರಿಯದವನಂತೆ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ.
ಬಾಲಕಿ ಕಾಣೆಯಾದ್ದರಿಂದ ಆತಂಕಗೊಂಡ ಪೆÇೀಷಕರು ಹುಡುಕಾಡಿದಾಗ ಗ್ರಾಮದಿಂದ ತುಸು ದೂರದಲ್ಲಿದ್ದ ಕಾಲುವೆಯೊಂದರ ಬಳಿ ತಲೆ ಜಜ್ಜಿ ಹೋಗಿದ್ದ ಬಾಲಕಿಯ ನಗ್ನ ದೇಹ ಪತ್ತೆಯಾಯಿತು. ಪೆÇಲೀಸರು ತನಿಖೆ ನಡೆಸಿ ಆರೋಪಿ ಉತ್ತಮ್ ಸಾಹುನನ್ನು ಬಂಧಿಸಿದ್ದಾರೆ.