ರಾಜ್ಯದ ಶ್ರೀಮಂತ ರಾಜಕಾರಣಿಯಿಂದ ನಾಮಪತ್ರ ಸಲ್ಲಿಕೆ… ಎಷ್ಟಿದೆ ಗೊತ್ತಾ ಆಸ್ತಿ?

ಬೆಂಗಳೂರು,ಏ.20

ರಾಜ್ಯ ವಿಧಾನಸಭಾ ಚುನಾವಣೆಗೆ ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಶಾಸಕರು ಘೋಷಿಸಿರುವ ಆಸ್ತಿ ಮೊತ್ತ ಬರೋಬ್ಬರಿ 1,015 ಕೋಟಿ ರೂ. ಆಗಿದ್ದು, ರಾಜ್ಯದ ಶ್ರೀಮಂತ ರಾಜಕಾರಣಿ ಎನ್ನಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಅವಿಮುಕ್ತೇಶ್ವರ ದೇವಸ್ಥಾದಲ್ಲಿ ಬೆಳಗ್ಗೆ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದ ಶಾಸಕ ನಾಗರಾಜ್ ಸಾವಿರಾರು ಕಾರ್ಯಕರ್ತರೊಂದಿಗೆ ತಾಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ರು. ಇನ್ನು ಎಂಟಿಬಿ ನಾಗರಾಜ್ ಸಲ್ಲಿಸಿರುವ ನಾಮಪತ್ರದಲ್ಲಿ ವಿವಿಧ ಬ್ಯಾಂಕ್‌‌ಗಳಲ್ಲಿ 27 ಕೋಟಿ ಸಾಲ ಸೇರಿದಂತೆ, ಒಂದು ಸಾವಿರದ ಹದಿನೈದು ಕೋಟಿ ರೂಪಾಯಿಗಳ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಆಸ್ತಿ ವಿವರ
ಬ್ಯಾಂಕುಗಳ ಉಳಿತಾಯ ಖಾತೆಯಲ್ಲಿ 6.1 ಕೋಟಿ, ಖಾಯಂ ಠೇವಣಿಯಾಗಿ 141.97 ಕೋಟಿ, ಎಂಟಿಬಿ ಎಸ್ಟೇಟ್ಸ್ ಅಂಡ್ ಪಾರ್ಪರ್ಟಿಸ್  ಪಾಲುದಾರಿಕೆ ಸಂಸ್ಥೆಯಲ್ಲಿ 141 ಕೋಟಿ, ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸಾಲವಾಗಿ 234 ಕೋಟಿ, 2.14 ಕೋಟಿ ಮೌಲ್ಯದ 7 ವಾಹನಗಳು. ಪತ್ನಿ ಮತ್ತು ನಾಗರಾಜ್ ಹೆಸರಿನಲ್ಲಿ 578.64 ಕೋಟಿ ಸ್ಥಿರಾಸ್ತಿ, 437.15 ಕೋಟಿ ಚರಾಸ್ತಿ, 3.71 ಕೋಟಿ ಮೌಲ್ಯದ 3 ಕೆಜಿ 606 ಗ್ರಾಂ ಚಿನ್ನಾಭರಣ, 85 ಕ್ಯಾರೆಟ್ ವಜ್ರ, 240 ಕೆಜಿ ಬೆಳ್ಳಿ ಆಭರಣಗಳು, ನಾಗರಾಜ್ ಹೆಸರಿನಲ್ಲಿ 63 ಎಕರೆ, ಪತ್ನಿ ಹೆಸರಿನಲ್ಲಿ 4 ಎಕರೆ ಸೇರಿದಂತೆ 54.86 ಕೋಟಿ ಮೌಲ್ಯದ ಕೃಷಿ ಜಮೀನು, 367.15 ಕೋಟಿ ಮೌಲ್ಯದ ಕೃಷಿಯೇತರ ಜಮೀನು, 88 ಕೋಟಿ ರೂಪಾಯಿ ಮೌಲ್ಯದ ವಾಸದ ಕಟ್ಟಡ, ಜತೆಗೆ ವಿವಿಧ ಬ್ಯಾಂಕ್‌‌‌ಗಳಲ್ಲಿ 27.70 ಕೋಟಿ ಸಾಲ ಮಾಡಿರುವುದಾಗಿ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ