ಬೆಂಗಳೂರು,ಏ.19-ವರನಟ ಡಾ.ರಾಜ್ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಚಾಲುಕ್ಯ ಡಾ.ರಾಜ್ಕುಮಾರ್ ಪ್ರತಿಮೆ ಪ್ರತಿಷ್ಠಾಪನ ಟ್ರಸ್ಟ್ ವತಿಯಿಂದ ಕುರುಬರಹಳ್ಳಿಯಲ್ಲಿನ ಡಾ.ರಾಜ್ ಪ್ರತಿಮೆ ಎದುರು ಮಹಿಳಾ ಮತ್ತು ಪುರುಷರ ಕುಸ್ತಿ ಪಂದ್ಯಾವಳಿಯನ್ನು ಏ.24ರಂದು ಮೊಟ್ಟ ಮೊದಲ ಬಾರಿಗೆ ಆಯೋಜಿಸಲಾಗಿದೆ.
ಅಂದು ಸಂಜೆ 5 ಗಂಟೆಗೆ ಹೊನಲು-ಬೆಳಕಿನ ಜಿದ್ದಾಜಿದ್ದಿನ ಚಾಲುಕ್ಯ ಡಾ.ರಾಜ್ ಕುಸ್ತಿ ಕೇಸರಿ ಪಂದ್ಯಾವಳಿಗಳು ನಡೆಯಲಿದೆ.
ಪಂದ್ಯಾವಳಿಯಲ್ಲಿ ಪ್ರಥಮ ಬಾರಿಗೆ ಮಹಿಳಾ ಕುಸ್ತಿ ಆಯೋಜಿಸಲಾಗಿರುವುದು ಪ್ರಮುಖ ವಿಶೇಷವಾಗಿದ್ದು , ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ.
ಪದ್ಮಭೂಷಣ ಡಾ.ರಾಜ್ಕುಮಾರ್ ಅವರ 89ನೇ ಹುಟ್ಟುಹಬ್ಬದ ಪ್ರಯುಕ್ತ ಅಂದು ಬೆಳಗ್ಗೆ 10 ಗಂಟೆಗೆ ಸಿಹಿ ವಿತರಿಸಲಾಗತ್ತದೆ.
ಸಮಾರಂಭದಲ್ಲಿ ತೀರ್ಪುಗಾರರಾಗಿ ಜೈ ಹನುಮಾನ್ ವ್ಯಾಯಾಮ ಶಾಲೆಯ ಪೈಲ್ವಾನ್ಗಳಾದ ಗಿರಿರಾಜ್ ಹಾಗೂ ಕೆಂಪಣ್ಣ , ಶಿವಣ್ಣ , ಕದಂಬ ಚೆಲುವರಾಜ್, ನಾಗರಾಜ್, ರಮೇಶ್, ಶರ್ಮ, ಶಿವಪ್ರಸಾದ್, ಹಿರಿಯ ಪೈಲ್ವಾನ್ಗಳಾದ ಜಯರಾಮಣ್ಣ, ಸಿದ್ದರಾಮಯ್ಯ, ತಮ್ಮಯ್ಯಣ್ಣ , ಚಿನ್ನಣ್ಣ , ಪಾಂಡು ಸೇರಿದಂತೆ ಹಲವಾರು ಪೈಲ್ವಾನ್ಗಳು ಪಾಲ್ಗೊಳ್ಳಲಿದ್ದಾರೆ.