ಬೆಂಗಳೂರು.ಏ.19- ಅರ್ಥ ಡೇ ಬೆಂಗಳೂರು ಸಂಘಧ ವತಿಯಿಂದ ವ್ಶಿಶ್ವ ಭೂ ದಿನಾಚರಣೆಯನ್ನು ಏಪ್ರಿಲ್ 22 ರಂದು ಎಸ್.ಟಿ. ಮಾಕ್ರ್ಸ್ ರೋಡ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಸದಸ್ಯೆ ನಮಿತಾ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ತ್ಯಾಜ್ಯ ನಿರ್ವಹಣಾ, ವಿದ್ಯುತ್ ವಾಹನಗಳ ಬಳಕೆ ಸೌರಶಕ್ತಿ ಹಗೂ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ಯಕ್ರಮದ ಉದ್ದೇಶವಾಗಿದೆ ಂದು ತಿಳಿಸಿದರು.
ಮುಂದಿನ ಪೀಳಿಗೆಯಲ್ಲಿ ಸಮುದಾಯವು ಹೇಗೆ ಮಾಲಿನ್ಯರಹಿತ ಪರಿಸರದ ಕಡೆಗೆ ಗಮನ ಹರಿಸಬೇಕು ಎಂಬುದನ್ನು ತಿಳಿಸಲಾಗುವುದು. ವ್ಯಯಕ್ತಿಕವಾಗಿ ಪ್ರತಿಯೊಬ್ಬರಲ್ಲೂ ಅಡಗಿರುವ ಪರಿಸರ ಸ್ನೇಹಿ ಸ್ವಭವವನ್ನು ಪ್ರದರ್ಶಿಸಲಾಗುವುದು ಎಂದರು. ವಿಶೇಷವಾಗಿ ಕಾರ್ಯಕ್ರಮದಲ್ಲಿ ಪರದೆ ಮೇಲೆ ಹವಾಮಾನ ಬದಲಾವಣೆಯನ್ನು ಕುರಿತು ಕಿರು ಚಿತ್ರವನ್ನು ಪ್ರದರ್ಶಿಸಲಾಗುವುದು ಅಲ್ಲದೆ ಬಿದಿರು ಹುಲ್ಲುನಿಂದ ಸ್ಥಳೀಯ ಕುಶಲಕಾರ್ಮಿಕರಿಂದ ಕರ್ಯಕಾರ ಮಾಡುವುದು, ಡೈಲಿ ಡಂಪ್ ನಿಂದ ಕಾಂಪೂಸ್ಟಿಂಗ ಕಾರ್ಯಗಾರ ಕ್ಲೈಮೆಂಟ್ ಚೇಂಜ್ ಸೆಲ್ಯೂಷನ ಕುರಿತಾದ ಕಿರುಚತ್ರ ಪ್ರದರ್ಶಿಸಲಾಗುವುದು ಎಂದರು