ಪಠಾಣ್‍ಕೋಟ್, ಏ.19-ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಇಬ್ಬರು ವ್ಯಕ್ತಿಗಳು ಕಾರೊಂದನ್ನು ಅಪಹರಿಸಿ ಭಾರತೀಯ ವಾಯುಪಡೆ ನೆಲೆ ಬಳಿ ಕಾಣಿಸಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪಂಜಾಬ್‍ನ ಅತ್ಯಂತ ಸೂಕ್ಷ್ಮ ಪ್ರದೇಶ ಪಠಾಣ್‍ಕೋಟ್‍ನಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಮಾರುತಿ ಸುಜಿಕಿ ಆಲ್ಟೋ ಕಾರೊಂದನ್ನು ಅಪಹರಿಸಿದ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ನಂತರ ವಾಯು ನೆಲೆ ಬಳಿ ರಸ್ತೆಯಲ್ಲಿ ಕಾರೊಂದು ಬಿಟ್ಟು ಕಣ್ಮರೆಯಾದರು ಎಂದು ಸ್ಥಳೀಯರೊಬ್ಬರು ನೀಡಿದ ಹೇಳಿಕೆಯಿಂದಾಗಿ ಇಡೀ ಪ್ರದೇಶ ಹೈ ಅಲರ್ಟ್ ಆಗಿದ್ದು, ನಗರದಾದ್ಯಂತ ಭದ್ರತಾಪಡೆಗಳು ರಸ್ತೆಗಳಿಗೆ ಬ್ಯಾರಿಕೇಡ್‍ಗಳನ್ನು ಅಡ್ಡವಾಗಿ ನಿಲ್ಲಿಸಿ ವಾಹನಗಳ ತೀವ್ರ ತಪಾಸಣೆ ನಡೆಸುತ್ತಿದೆ.
2016ರಲ್ಲಿ ಇದೇ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿ ಯೋಧರನ್ನು ಕೊಂದು ಅನೇಕರನ್ನು ಗಾಯಗೊಳಿಸಿದ್ದರು. ಭಯೋತ್ಪಾದಕರ ಕೃತ್ಯದಿಂದ ದೇಶ ಬೆಚ್ಚಿ ಬಿದ್ದಿತು.
ನಾಲ್ಕು ದಿನಗಳ ಹಿಂದಷ್ಟೇ ತಾನು ಇಬ್ಬರು ಶಂಕಿತ ವ್ಯಕ್ತಿಗಳಿಗೆ ಕಾರಿನಲ್ಲಿ ಲಿಫ್ಟ್ ಕೊಟ್ಟಿದ್ದಾಗಿ ವಾಹನ ಚಾಲಕನೊಬ್ಬ ನೀಡಿದ್ದ ಹೇಳಿಕೆಯಿಂದ ಪೆÇಲೀಸರು ಪಠಾಣ್‍ಕೋಟ್‍ನಲ್ಲಿ ಕಟ್ಟೆಚ್ಚರ ವಹಿಸಿದ್ದರು.