ಬೆಂಗಳೂರು, ಏ.19-ಭಾರತದ ಅತಿ ದೊಡ್ಡ ರಮ್ಮಿ ವೆಬ್‍ಸೈಟ್ ರಮ್ಮಿಸರ್ಕಲ್ ಪ್ರಸ್ತುತ ಪಡಿಸುತ್ತಿದೆ ದಿ ಗ್ರಾಂಡ್ ರಮ್ಮಿ ಚಾಂಪಿಯನ್‍ಷಿಪ್ (ಜಿಆರ್‍ಸಿ). ಗೋವಾದದ ಲಲಿತ್ ರೆಸಾರ್ಟ್ ಅಂಡ್ ಸ್ಪಾದಲ್ಲಿ ನಡೆಯಲಿರುವ ಆಫ್‍ಲೈನ್ ಟೂರ್ನಿಯಲ್ಲಿ 204 ಮಂದಿ ರಮ್ಮಿ ಫೈನಲಿಸ್ಟ್‍ಗಳು ಪ್ರಶಸ್ತಿ ಮೊತ್ತಕ್ಕೆ ಸೆಣಸಲಿದ್ದಾರೆ.
ಪ್ರತಿಷ್ಠಿತ ರಮ್ಮಿ ಫೈನಲ್ಸ್ ಮೇ 19 ಶನಿವಾರ ನಡಿಯಲಿದ್ದು. 70ಲಕ್ಷ ರೂ ವಿಜೇತರ ಪಾಲಾಗಲಿದೆ ಮನರಂಜನೆಯಿಂದ ಕೂಡಿದ್ದರೂ ರೋಚಕವಾಗಿರುವ ಚಾಂಪಿಯನ್‍ಷಿಪ್ ಭಾಗವಹಿಸುವವರಿಗೆ ಸಂಜೆ ಅವಿಸ್ಮರಣೀಯ ಆಗಿರುವಂತೆ ಮಾಡುತ್ತದೆ. ಗೋವಾ ಪ್ರವಾಸದ ವೆಚ್ಚ- ರಮ್ಮಿ ಆಟಗಳು, ಕಾಕ್‍ಟೈಲ್ ಸಮಾರಂಭಗಳು, ಭರ್ಜರಿ ಭೋಜನ ಹಾಗೂ ನೇರ ಸಾಧನೆ ಇದರಲ್ಲಿ ಸೇರಿರುತ್ತದೆ.
ಏಪ್ರಿಲ್ ಎಂಟರಿಂದ ಗ್ರಾಂಡ್ ರಮ್ಮಿ ಚಾಂಪಿಯನ್‍ಷಿಪ್ ಆರಂಭವಾಗಿದೆ. ಪ್ರತಿ ನಿತ್ಯದ ಟೂರ್ನಿಯನ್ನು ಇದು ಒಳಗೊಂಡಿದೆ. ಪ್ರತಿದಿನ ನಡೆಯುವ ಟೂರ್ನಿಯ ವಿಜೇತರು ಭಾನುವಾರ ನಡೆಯಲಿರುವ ಫಿನೇಲ್‍ನಲ್ಲಿ ಆಡುವ ಅವಕಾಶ ಪಡೆಯುತ್ತಾರೆ. ಇದು ಪ್ರತಿ ವಾರಾಂತ್ಯದಲ್ಲಿ ನಡೆಯುತ್ತದೆ. ಭಾನುವಾರ ನಡೆಯುವ ಫಿನೇಲ್‍ನಲ್ಲಿ ವಿಜೇತರಾಗುವವರು 2018 ರ ಮೇ 19 ರಂದು ಗೋವಾದಲ್ಲಿ ನಡೆಯಲಿರುವ ಜಿಆರ್‍ಸಿ ಫಿನೇಲ್‍ನಲ್ಲಿ ಭಾಗವಹಿಸಲು ಅಗತ್ಯವಿರುವ ಗೋಲ್ಡನ್ ಟಿಕೆಟ್ ಪಡೆಯುತ್ತಾರೆ.
ಇಂತಹ ನೇರ ಟೂರ್ನಿ ಭಾರತದಲ್ಲಿ ಇದೇ ಮೊದಲನೆಯದು. ರಮ್ಮಿ ಸರ್ಕಲಿನ ಆನ್‍ಲೈನ್‍ನಲ್ಲಿ ನಡೆಯುವ ಟೂರ್ನಿಯಲ್ಲಿ ರಾಷ್ಟ್ರದ ಎಲ್ಲೆಡೆಯಿಂದ ಸ್ಪರ್ದಿಸುತ್ತಾರೆ. ಆನಂತರ ಗೋವಾದಲ್ಲಿ ನಡೆಯಲಿರುವ ಗ್ರಾಂಡ್ ಫಿನೇಲ್ ಸೇರುತ್ತಾರೆ. ರಮ್ಮಿ ಆಟದ ಗತ ವೈಭವ ಮರುಕಳಿಸುವಂತೆ ಮಾಡುವ ಯತ್ನ ನಮ್ಮದಾಗಿದೆ. ಇದು ಆನ್‍ಲೈನ್ ಆಕರ್ಷಣೆಯನ್ನೂ ಹೊಂದಿದೆ. ರಮ್ಮಿ ಆಟದ ವಿಶೇಷ ರಾತ್ರೆಗೆ ನಮ್ಮ ಆಟಗಾರರನ್ನು ನಾವು ಸ್ವಾಗತಿಸುತ್ತಿದ್ದೇವೆ ಎಂದು ಕೊ-ಸಿಇಒ ಹಾಗೂ ಸಹ ಸಂಸ್ಥಾಪಕ ಭವಿನ್ ಪಾಂಡ್ಯ ತಿಳಿಸಿದ್ದಾರೆ.